ಕೋವಿಡ್-19 ನಿಯಂತ್ರಣಕ್ಕೆ ಕಾರ್ಯಪಡೆ ಸಭೆ

ದಾವಣಗೆರೆ, ಜೂ.6; ತಾಲ್ಲೂಕಿನ ಕುರ್ಕಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷ ಬಿ.ಜಿ ನಂದ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಕೋವಿಡ್-19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ಕಾರ್ಯಪಡೆ ಸಭೆಯನ್ನು ಆಯೋಜಿಸಲಾಯಿತು. ಮಾಯಕೊಂಡ ಕ್ಷೇತ್ರದ ಶಾಸಕರಾದ ಪ್ರೋ.ಲಿಂಗಣ್ಣ ಮತ್ತು ಬಯಲುಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಅಣಬೇರು ಜೀವನಮೂರ್ತಿ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು.ಸಭೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಖಾ ಐ.ಬಿ ಅವರು ಎರಡನೇ ಅಲೆ ನಿಯಂತ್ರಣಕ್ಕಾಗಿ ಗ್ರಾಮದಲ್ಲಿ ಕೈಗೊಂಡ ಹಲವು ಕಾರ್ಯಕ್ರಮಗಳ ವಿವರಗಳನ್ನು ಪಿಪಿಟಿ ಮೂಲಕ ಮಾಹಿತಿ ನೀಡಿದರು. ಈ ವೇಳೆ ಶಾಸಕ ಪ್ರೋ.ಲಿಂಗಣ್ಣ ಮಾತನಾಡಿ, ಕುರ್ಕಿ ಗ್ರಾಮ ಪಂಚಾಯಿತಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು, ಜಾಗೃತಿ ಜಾಥಾಗಳು, ಸೋಂಕಿತರ, ಸಂಪರ್ಕಿತರ ಆರೋಗ್ಯ ಕಾಳಜಿ ಕಾರ್ಯಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಇತರೆ ಗ್ರಾಮಗಳಿಗೂ ಮಾದರಿಯಾಗಿದೆ. ಇಲ್ಲಿಯ ಆಡಳಿತ ವರ್ಗ, ಸಿಬ್ಬಂದಿ ವರ್ಗ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ನಿರ್ವಹಿಸಿದ ಕಾರಣ ಸೋಂಕಿತರ ಮತ್ತು ಮರಣ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕಾರ್ಯಪಡೆಯ ಮೂಂಚೂಣಿ ಕಾರ್ಯಕರ್ತರಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಮತ್ತು ವಿಶೇಷ ಚೇತನರಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿ ವಿಶೇಷ ಚೇತನರಿಗೆ ಶೇ.90 ರಷ್ಟು ಲಸಿಕೆ ಹಾಕಿರುವುದನ್ನು ಕಂಡು ಸಿಬ್ಬಂದಿಗಳಿಗೆ ಹಾಗೂ ಆಡಳಿತ ವರ್ಗದವರನ್ನು ಅಭಿನಂದಿಸಿದರು. ಹದಡಿ  ಠಾಣೆಯ ಆರಕ್ಷಕ ನಿರೀಕ್ಷಕ ಪ್ರಸಾದ್, ಮುಖಂಡರಾದ ಶ್ಯಾಗಲೆ ದೇವೆಂದ್ರಪ್ಪ, ಕೆ.ಜಿ ರೇವಣಸಿದ್ದಪ್ಪ, ಕೆ.ಜಿ ಬಸವರಾಜಪ್ಪ ಸೇರಿದಂತೆ ಇನ್ನಿತರೆ ಕಾರ್ಯಪಡೆಯ ಸದಸ್ಯರುಗಳು ಹಾಜರಿದ್ದರು. Attachments area