ಕೋವಿಡ್ 19: ಐದು ದಿನದಲ್ಲಿ 35 ಸಾವು

ಕಲಬುರಗಿ ಏ 30: ಕಳೆದ ಐದು ದಿನಗಳಿಂದ ಜಿಲ್ಲೆಯಲ್ಲಿ 35 ಜನ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಇದರಲ್ಲಿ 22 ಜನ ಕಲಬುರಗಿ ನಗರಕ್ಕೆ ಸೇರಿದವರಾಗಿದ್ದಾರೆ.
ಕೊರೋನಾ ಆರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 460 ಜನ ಮೃತ ಪಟ್ಟಿದ್ದು ,ಅದರಲ್ಲಿ 302 ಜನ ಕಲಬುರಗಿ ನಗರಕ್ಕೆ ಸೇರಿದವರಾಗಿದ್ದಾರೆ.
ಇದುವರೆಗೆ ಕಮಲಾಪುರ ತಾಲೂಕಿನಲ್ಲಿ 7,ಜೇವರಗಿ 15,ಯಡ್ರಾಮಿ 2,ಅಳಂದ 31,ಅಫಜಲಪುರ 19,ಸೇಡಂ 11,ಚಿತ್ತಾಪುರ 23,ಶಹಬಾದ 18 ಮತ್ತು ಚಿಂಚೋಳಿ ತಾಲೂಕಿನಲ್ಲಿ 14 ಕೋವಿಡ್ 19 ಸಾವು ಸಂಭವಿಸಿವೆ.
ಗುಣಮುಖ:
ಕಳೆದ ವರ್ಷದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 37956 ಜನರಿಗೆ ಸೋಂಕು ತಗುಲಿದ್ದು,29,564 ಜನ ಗುಣಮುಖರಾಗಿದ್ದಾರೆ. ಸದ್ಯ 7932 ಸಕ್ರಿಯ ಪ್ರಕರಣಗಳು ಇವೆ.