ಕೋವಿಡ್- 19 ಆಸ್ಪತ್ರೆಗೆ ಭೇಟಿ ನೀಡಿದ ಡಾ ಚಂದ್ರಶೇಖರ ಪಾಟೀಲ್

ಹುಮನಾಬಾದ:ಎ.22: ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ ಪಾಟೀಲರವರು ಹುಮನಾಬಾದ ನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮಾಡುತ್ತಿರುವ ಸೇವೆಯನ್ನು ಕಂಡು ಶ್ಲಾಫಿಸಿದರು. ಸ್ಧಳೀಯ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಇಲ್ಲದಿರುವ ಮಾಹಿತಿ ಪಡೆದರು ಡಿ, ಹಚ್, ಓ, ವಿ,ಜಿ ರೆಡ್ಡಿ ರವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು ಕರೆಗೆ ಸ್ಪಂದಿಸಿ ರವರು ತುರ್ತಾಗಿ ಇಂಜೆಕ್ಷನ್ ಕಳುಹಿಸಿತ್ತಿದ್ದೆನೆ ಎಂದು ಹೇಳಿದರು ವೈದ್ಯರೆ ನಿಮ್ಮ ಜೊತೆ ನಾನಿದ್ದೇನೆ ನಮ್ಮ ಜನಗಳಿಗೆ ತೊಂದರೆಯಾಗದಂತೆ ನಿಗಾವಹಿಸಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಜಿ,ಪಂ ಸದಸ್ಯರಾದ ಶ್ರೀ ಲಕ್ಷಣರಾವ ಬಳ್ಳಾ ಶಿವಕುಮಾರ ಸಿದ್ದೇಶ್ವರ್ ಆದ ಡಾ, ನಾಗನಾಧ ಹುಲಸೂರೆ ಡಾ, ವಿಸ್ವ ಸಾಯಿ ನೀರ್ ಡಾ, ದಿಲೀಪ ಡೊಂಗ್ರೆ ಸೇರಿಂದತೆ ಇತರೆ ವೈದ್ಯರು ಉಪಸ್ದಿತರಿದ್ದರು.