ಕೋವಿಡ್-19ರ ಎರಡನೇಯ ಅಲೆ ನಿಯಂತ್ರಣ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಲ್ಲ್ಲಿ ಜನ ಜಾಗೃತಿ ಮೂಡಿಸಿದ ಎಡಿಜಿಪಿ ಭಾಸ್ಕರ್‍ರಾವ್

ವಿಜಯಪುರ, ಏ.26-ಭಾಸ್ಕರ್ ರಾವ್, ಎಡಿಜಿಪಿ ರೈಲ್ವೇ ಬೆಂಗಳೂರು, ರವರು ವಿಜಯಪುರ ಜಿಲ್ಲೆಯ ಕೋವಿಡ್-19 ಉಸ್ತುವಾರಿ ಇದ್ದು, ಇಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರಿಗೆ ಕೋವಿಡ್-19ರ ಎರಡನೇಯ ಅಲೆ ನಿಯಂತ್ರಿಸುವ ಬಗ್ಗೆ ನಿರ್ದೇಶನವನ್ನು ನೀಡಿದರು.
ನಂತರ ಪತ್ರಿಕಾ ಗೋಷ್ಟಿಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕವನ್ನು ಧರಿಸುವದು, ಅಲ್ಲದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಗುವದು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕಾಲ ಕಾಲಕ್ಕೆ ನೀಡಲಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಹೋಗುವಂತೆ ತಿಳಿಸಿದರು.
ಅದಲ್ಲದೆ ಮಾಧ್ಯಮದಲ್ಲಿ ಕೋವಿಡ್-19 ಸೋಂಕು ತಗಲಿದ ನಂತರ ಆಸ್ಪತ್ರೆಯಲ್ಲಿ ಉಪಚಾರಹೊಂದಿದ ಬಳಿಕ ಮಾನಸಿಕ ಕಿನ್ನತೆಗೆ ಒಳಗಾಗದೆ ಧೈರ್ಯದಿಂದ ಇರುವಂತೆ ಪ್ರಸಾರ ಮಾಡಲು ತಿಳಿಸಿದರು.
ಹಾಗೂ ವಿಜಯಪುರ ಜಿಲ್ಲೆಯು ಮಹಾರಾಷ್ಟ್ರ ರಾಜ್ಯದ ಗಡಿ ಜಿಲ್ಲೆಯಾಗಿದ್ದು, ಸಾರ್ವಜನಿಕರು ಕೋವಿಡ್ ವರದಿಯೊಂದಿಗೆ ಚಕ್‍ಪೋಸ್ಟ್ ಮುಖಾಂತರ ಬರುವದು, ಸಾರ್ವಜನಿಕರು ತರಕಾರಿ ಮಾರುಕಟ್ಟೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವದು, ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ ಕೋವಿಡ್-19 ಎರಡನೇಯ ಅಲೆ ತಡೆಗಟ್ಟಲು ಜಾಗೃತಿ ಮೂಡಿಸಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮದ ಪ್ರಮುಖ ಮುಖಂಡರ ಸಹಯೋಗದೊಂದಿಗೆ ಜಾಗೃತಿ ಮೂಡಿಸಲಾಗುವದು ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಜಯಪುರ, ಡಾ. ರಾಮ್.ಎಲ್.ಅರಸಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪುರ, ಹಾಗೂ ವಿಜಯಪುರ ನಗರದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.