ಕೋವಿಡ್-19ಗೆ ಸ್ಪಂದಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ : ಬಿ.ಶರತ್

ಮೈಸೂರು,ಸೆ.15:- ವೆಂಟಿಲೇಟರ್ ಎನ್ನುವುದು ಕೋವಿಡ್ ಪ್ರಕರಣದಲ್ಲಿ ತೀರಾ ವಿರಳವಾಗಿ ಬಳಸುವ ಯಂತ್ರವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದರು.
ಅವರಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಯಾರಿಗೆ ಲಂಗ್ಸ್ ಕೆಪೆಸಿಟಿ ಇಲ್ಲವೋ ಅಂತವರಿಗೆ ಮಾತ್ರ ನೀಡಲಾಗುವುದು. ಆಕ್ಸಿಜನ್ ಸಪ್ಲೈ ಮಾಡಬೇಕಾಗಿರತ್ತೆ. ಹೈಪ್ಲೋನೇಶನ್ ಆಕ್ಸಿಜನ್ ನೀಡಬೇಕಾಗತ್ತೆ. ಕೋವಿಡ್-19 ಕುರಿತು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಆದೇಶ ಇದೆ. ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಅಂತ. ಬಹಳಷ್ಟು ಆಸ್ಪತ್ರೆಗಳು ಮುಂದೆ ಬಂದು ಬೆಡ್ಸ್ ಕೊಟ್ಟಿದ್ದಾರೆ. ಅದನ್ನು ಸಂಜೆ ಹೇಳುತ್ತೇನೆ. ಯಾರು ಇದಕ್ಕೆ ಸ್ಪಂದಿಸಲ್ಲವೋ ಅವರ ವಿರುದ್ಧ ಕ್ರಮ ಜರುಗಿಸಬೇಕಾಗಲಿದೆ ಎಂದರು.
ಹೆಚ್ಚು ಹೆಚ್ಚು ಪಾಸಿಟಿವ್ ಆಗುವುದು ನಮ್ಮ ಕೈಲಿದೆ. ಜನಸಾಮಾನ್ಯರು ಮಾಸ್ಕ್ ಧರಿಸಲ್ಲ. ಈಗ ನಾನು ನೋಡಿದ ಹಾಗೆ ಮಾರ್ಕೆಟ್ ಗೆ ಅಲ್ಲಿ ಇಲ್ಲಿ ಓಡಾಡುವಾಗ ಮಾಸ್ಕ್ ಧರಿಸಲ್ಲ, ಮಾಸ್ಕ್ ಧರಿಸಿ. ಕಡ್ಡಾಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕೇಸ್ ಹೆಚ್ಚಾಗಲು ಕಾರಣವಾಗಿದೆ. ಕಡ್ಡಾಯವಾಗಿ ಪಾಲಿಸದೇ ಇದ್ದಲ್ಲಿ ಕೇಸಸ್ ಮುಂದುವರಿಯತ್ತೆ. ಇದು ನಮ್ಮೆಲ್ಲರ ಜವಾಬ್ದಾರಿ. ಮೈಸೂರು ಜಿಲ್ಲೆಯ ಜನತೆಯಲ್ಲಿ ನನ್ನ ಕಳಕಳಿಯ ಮನವಿ ಏನೆಂದರೆ ಮಾಸ್ಕ್ ಧರಿಸದೆ ಹೊರಗೆ ಬರಬೇಡಿ, ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಿ . ಆಗಾಗ ಕೈಯನ್ನು ಶುಚಿಗೊಳಿಸಿ ಎಂದರು.
ಸರ್ಕಾರಿ ವೈದ್ಯರ ಮುಷ್ಕರ ಮುರಿತು ಪ್ರತಿಕ್ರಿಯಿಸಿ ನಾನು ಅವರ ಜೊತೆ ನಿನ್ನೆ ಮಾತಾಡಿದ್ದೆ. ಸರ್ವಿಸಸ್ ನಿಲ್ಲಿಸಲ್ಲ, ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದಾರೆ ಎಂದರು.
ದಸರಾ ಈ ವರ್ಷ ಚಾಮುಂಡಿಬೆಟ್ಟದಲ್ಲಿ, ಅರಮನೆ ಆವರಣದಲ್ಲಿ ಮಾತ್ರ ಕಾರ್ಯಕ್ರಮ ನಡೆಯತ್ತೆ. ಕಂಟ್ರೋಲ್ ಮಾಡಿ ಕಾರ್ಯಕ್ರಮ ನಡೆಸುತ್ತೇವೆ . ಹೆಲ್ತ್ ಟೆಸ್ಟ್, ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಗುವುದು. ಲಿಮಿಟ್ ನಲ್ಲಿ ಜನರನ್ನು ಬಿಡಲಾಗುವುದು ಎಂದರು.