ಕೋವಿಡ್ ೨ ನೇ ಅಲೆ : ಕೆಲಸದಲ್ಲಿ ಲೋಪ ವೆಸಗಿದರೆ ಕಟ್ಟುನಿಟ್ಟಿನ ಕ್ರಮ

ರಾಯಚೂರು.ಏ.೨೫- ರಾಜ್ಯದಲ್ಲಿ ಕೋವಿಡ್ ೨ ನೇ ಅಲೆ ದಿನದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಕೂಡ ಕೋವಿಡ್ ಪ್ರಕರಣಕಗಳು ಕೊರೋನಾ ಸಂಖ್ಯೆ ಜಾಸ್ತಿಯಾಗಿದೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕೆಲಸದಲ್ಲಿ ಲೋಪ ವೆಸಗಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಂದು ಅಪಾರ ಜಿಲ್ಲಾಧಿಕಾರಿ ದುರ್ಗೇಶ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಛೇರಿ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದರು. ಕೋವಿಡ್ ಮೊದಲೆನೆ ಅಲೆಯಲ್ಲಿ ೨ ನೇ ರ್‍ಯಾಂಕ್‌ನಲ್ಲಿದ್ದ ಜಿಲ್ಲೆ ಕೋವಿಡ್ ೨ ನೇ ಅಲೆಯಲ್ಲಿ ೧೭ ನೇ ರ್‍ಯಾಂಕ್‌ನಲ್ಲಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದ ದೆವದುರ್ಗದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಎಲ್ಲಾ ತಾಲೂಕುಗಳಿಗಿಂತ ಜಾಸ್ತಿ ಇದ್ದು, ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಎಲ್ಲಾ ಅಧಿಕಾರಿಗಳಿಗೆ ಕೊಟ್ಟಿರುವಂತ ದಂಡದಲ್ಲಿ ಗುರಿ ಸಾಧಿಸದಿದ್ದರೆ ನಿಮ್ಮಿಂದ ದಂಡ ಕಟ್ಟಿಸಿಕೊಳ್ಳಲಾಗುವುದು ಎಂದರು.
ಎಲ್ಲಾ ಪಿಡಿಓಗಳು ಎಷ್ಟು ಜನ ಕ್ವಾರಂಟೈನಲ್ಲಿ ಇದ್ದಾರೆ ಎನ್ನುವುದು ಮಾಹಿತಿ ಸಂಗ್ರಹಿಸಿ ಕೊಡಬೇಕು ಹಾಗೂ ಮನೆ ಮನೆಗೆ ಹೋಗಿ ಕ್ವಾರಂಟೈನಲ್ಲಿರುವ ಪೋಟೋಗಳನ್ನು ಹಾಕಬೇಕು.
ಈ ಸಂದರ್ಭದಲ್ಲಿ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಸುರೇಂದ್ರ ಬಾಬು, ನಗರ ಸಭೆ ಯೋಜನೆ ನಿರ್ದೇಶಕ ಮಹೇಂದ್ರ ಕುಮಾರ, ನಗರ ಸಭೆ ಪೌರಾಯುಕ್ತ ವೆಂಕೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.