ಕೋವಿಡ್-೧೯ ನಿಯಮ ಪಾಲಿಸಿ ಕೋರೊನಾದಿಂದ ಮುಕ್ತಿ ಪಡೆಯಿರಿ- ಮಂಗಳಾ ನಾಯಕ

ರಾಯಚೂರು,ನ.೦೭-ಕೊವಿಡ್-೧೯ ಕೊರೋನಾ ಸಾಂಕ್ರಾಮಿಕ ಮಹಾಮಾರಿಯಿಂದ “ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೇ ಹೈ” ಎಂಬ ಹಿರಿಯರ ಮಾತಿನಂತೆ ನಮ್ಮ ಉಸಿರೇ ನಮಗೆ ವೈರಿಯಾಗಿ ಕಾಡುತ್ತಿದೆ. ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಜರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿ ಕೊರೋನಾ ಮಹಾಮಾರಿ ಹೊಡಿಸಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಗಳಾ ನಾಯಕರವರು ಹೇಳಿದರು.
ಅವರು ನ.೬ರ ಶುಕ್ರವಾರ ನಗರದ ಸಾರ್ವಜನಿಕ ಉದ್ಯಾನವನದ ಹತ್ತಿರವಿರುವ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಭವನದಲ್ಲಿ ಸುಧಾಕರ್ ಅಸ್ಕಿಹಾಳ ರವರ ಗುರುಪುಟ್ಟ ಕಲಾ ಬಳಗ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಯಚೂರು ವತಿಯಿಂದ ಹಮ್ಮಿಕೊಂಡಿದ್ದ “ಸಂಗೀತ ಸಂಭ್ರಮ” ಕಾರ್ಯಕ್ರಮ ತಬಲಾ ವಾದ್ಯ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರಕಾರದ ಆದೇಶದಂತೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೇ ಜಿಲ್ಲೆಯ ಕಲಾವಿದರು ಬಹಳ ಸಂಕಷ್ಠದಲ್ಲಿದ್ದಾರೆ ಎಂಬುದು ನಮಗೂ ಮತ್ತು ಸರಕಾರಕ್ಕೂ ಗಮನವಿದೆ. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಯಾರೂ ಏನೂ ಮಾಡಕ್ಕಾಗದ ಪರಿಸ್ಥಿತಿಯಿಂದ ಹಲವು ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿತ್ತು. ಆದರೆ ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಟ್ಟುನಿಟ್ಟಿನ ನಿರ್ಧಾರಗಳ ಆದೇಶದಿಂದ ಕೋವಿಡ್ ೧೯ ಕೊರೋನಾ ರೋಗವು ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿರುವುದರಿಂದ ಸರಕಾರದ ಆದೇಶ ಪಾಲಿಸುವುದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಿರುವುದರಿಂದ ಕಲಾವಿದರಿಗೆ ಸ್ವಲ್ಪ ಅನುಕೂಲವಾಗಿದೆ ಎಂದರು.
ರಾಯಚೂರು ಬಿಸಿಲನಾಡು ಎಂಬುದು ಬಿಟ್ಟು ಶ್ರೀಮಂತ ಹೃದಯವಂತರ “ಕಲಾವಿದರ ನಾಡು” ಎಂದರೆ ತಪ್ಪೇನು ಇಲ್ಲ ಎಂದರು. ನನ್ನನ್ನು ಕಾರ್ಯಕ್ರಮದ ಉದ್ಘಾಟನೆಗೆ ಆಹ್ವಾನಿಸಿ ಮಾತನಾಡಲು ಅವಕಾಶ ಕೊಟ್ಟು ಸನ್ಮಾನಿಸಿ ಗೌರವಿಸಿದ್ದಕ್ಕೆ ಸಂಘದ ಅಧ್ಯಕ್ಷರಿಗೂ ಪದಾಧಿಕಾರಿಗಳಿಗೂ ಧನ್ಯವಾದಗಳು ಎಂದು ಹೇಳಿದರು.
ಹಿರಿಯ ಕಲಾವಿದ ಪಂ. ಸುಗೂರೇಶ ಅಸ್ಕಿಹಾಳರವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಪತ್ರಿಕಾ ಛಾಯಾಗ್ರಾಹಕ ಹಾಗೂ ಯೋಗ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಯವರು, ಸಂಗೀತಕ್ಕೂ ಯೋಗಕ್ಕೂ ಅವಿನಾಭಾವ ಸಂಬಂಧವಿದೆ ಯೋಗ ಮತ್ತು ಸಂಗೀತ ಇವೆರಡರಲ್ಲಿಯೂ ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವ ಮಹಾ ಶಕ್ತಿ ಇದೆ ಕಾರಣ ಸರ್ವರು ಯೋಗ ಮತ್ತು ಸಂಗೀತವನ್ನು ಅಭ್ಯಾಸ ಮಾಡಿ ಆರೋಗ್ಯವಂತರಾಗಿರಲು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗುರುಪೀಠದ ಅಧ್ಯಕ್ಷರಾದ ರಾಮಣ್ಣ, ರಾಮಚಂದ್ರಪ್ಪ ಮಸೀದಪುರ, ಎಂ. ಸುಭಾಷ್ ಅಸ್ಕಿಹಾಳ, ಬಿ.ಹೆಚ್. ಗುಂಡಳ್ಳಿ, ವೆಂಕಟೇಶ ಆಲ್ಕೋಡ್, ಜೋಷೆಫ್ ಆಶಾಪೂರು, ವೀರೇಂದ್ರ ಪಾಟೀಲ್ ಅರವಿ, ಶಾಂತಾ ಕುಲಕರ್ಣಿ, ರಾಘವೇಂದ್ರ ಆಶಾಪೂರು, ಕು. ಸಹಾನಾ ಬರೋರ್, ವಿಜಯಕುಮಾರ ದಿನ್ನಿ, ಬೂದೆಪ್ಪ ಸುಂಕೇಶ್ವರಾಳ, ಕು. ಮಾನಿಕಾ, ಕು. ರಾಘವೇಂದ್ರ ನಾಯಕ್, ಪಾರ್ವತಿ ಪಾಟೀಲ್, ರೇಖಾ ಗೌಡ, ಶ್ರೀದರ್ ಹೂಗಾರ್, ಅನಿಲ್ ಕುಮಾರ ಜಾಗೀರ್ ಮರ್ಚೇಡ್, ಪಿಕಳಿಹಾಳ ಅಯ್ಯಪ್ಪ ಸ್ವಾಮಿ ಹಿರೇಮಠ, ವಾದ್ಯ ಕಲಾವಿದರಾದ ಕು. ಬ್ರಹ್ಮೇಂದ್ರ ಮಂಜರ್ಲಾ, ಜಾನ್ ರಾಜ್, ವಿನೋದ್ ಕುಮಾರ ಆಶಾಪೂರು ಇದ್ದರು.
ಪ್ರಾರ್ಥನಾ ಗೀತೆಯನ್ನು ಮಹಾಲಕ್ಷ್ಮೀ ಪ್ರಸ್ತುತ ಪಡಿಸಿದರೆ, ನಿರೂಪಣೆಯನ್ನು ಎ.ಎಸ್. ಸುರೇಶ ಕುಮಾರ ನಡೆಸಿಕೊಟ್ಟರು.