ಕೋವಿಡ್ ೧೯ ತಡೆಗಟ್ಟುವ ಕಾರ್ಯಪಡೆ ಸಮಿತಿ ಸಭೆ


ಲಿಂಗಸೂಗೂರು.ಜೂ.೦೧-ದಿನದಿಂದ ದಿನಕ್ಕೆ ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸೊಂಕಿತರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಕೋವಿಡ್ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಲಿಂಗಸುಗೂರು ತಾಲೂಕಾ ಆಡಳಿತ ಶ್ರಮವಹಿಸುತ್ತಿದ್ದು, ಇಂದು ಕಾಳಾಪೂರದಲ್ಲಿ ಕೊವಿಡ್ ೧೯ ಸೊಂಕಿತರ ಮನೆಗಳಿಗೆ ಭೇಟಿ ನೀಡಿದ ತಾಲೂಕಾ ದಂಡಾಧಿಕಾರಿಗಳಾದ ಚಾಮರಾಜ ಪಾಟೀಲ್ ಮತ್ತು ಕಾಳಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಜಯಕುಮಾರ ಹೊಸಗೌಡ್ರ ಸೊಂಕಿತರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಪ್ರತ್ಯೇಕ ಶೌಚಾಲಯ, ವಸತಿ ಗೃಹ ಇದ್ದರೆ ಮಾತ್ರ ಹೊಮ್ ಕೊರೈಂಟನ್ ಗೇ ಅವಕಾಶ ಇಲ್ಲದಿದ್ದರೆ ಕಡ್ಡಾಯವಾಗಿ ಕೊರೈಂಟನ್ ಕೇಂದ್ರಕ್ಕೆ ಕಳುಹಿಸಲು ಪಿಡಿಒಗೇ ನಿರ್ದೇಶನ ನೀಡಿದರು. ಹಾಗೂ ಕೊವಿಡ್ ಲಕ್ಷಣಗಳಾದ ಜ್ವರ, ಕೆಮ್ಮು ನೆಗಡಿ ಇನ್ನಿತರ ರೋಗ ಲಕ್ಷಣಗಳನ್ನು ಹೊಂದಿದ ಸಂಶಯಾಸ್ಪದ ವ್ಯಕ್ತಿಗಳ ಪಟ್ಟಿ ಮಾಡುವಂತೆ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿದರು.
ಅದಲ್ಲದೇ ಕೊವಿಡ್ ೧೯ ನಿಯಂತ್ರಣಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ತಾಲುಕು ಆಡಳಿತ ದ ಕಾರ್ಯ ಕ್ಕೆ ಸಕ್ರಿಯವಾಗಿ ಬೆಂಬಲ ನೀಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ, ವಿಜಯಕುಮಾರ್ ಹೊಸಗೌಡ್ರ ಕಂದಾಯ ನಿರೀಕ್ಷಕರು ರಾಮಕೃಷ್ಣ, ಗ್ರಾಮ ಲೆಕ್ಕಾಧಿಕಾರಿ ವಿನಯ್ ಕುಮಾರ್, ಪಿಡಿಒ, ಮಹೇಶ್ ಬನ್ನಿಗೋಳ ಬಿಲ್ ಕಲೆಕ್ಟರ್ ಬಸವರಾಜ ಹುನಕುಂಟಿ ಪಂಚಾಯತ್ ಸಿಬ್ಬಂದಿಗಳಾದ, ಹುಲುಗಪ್ಪ ಬಸವರಾಜ್ ರಾಯಪ್ಪ, ಇನ್ನಿತರರಿದ್ದರು.