ಕೋವಿಡ್ ಹೋಗಲಾಡಿಸಲು ಕಲ್ಕೆರೆ ಮಾರಮ್ಮನಿಗೆ ಬಲಿಪೂಜೆ

ಪಿರಿಯಾಪಟ್ಟಣ: ಮೇ.28: ಕೋವಿಡ್ ಸೊಂಕಿನ ವಿರುದ್ಧ ವೈದ್ಯಕೀಯ ಹೋರಾಟಗಳು ಮುಂದುವರಿಯುತ್ತಿವೆ. ಮತ್ತೊಂದೆಡೆ ಸಾಂಕ್ರಾಮಿಕ ಹೋಗಲಾಡಿಸಲು ಜನ ಮೂಢನಂಬಿಕೆಯ ಮೊರೆ ಹೋಗುವುದನ್ನು ಮುಂದುವರಿಸಿದ್ದಾರೆ.
ಪಿರಿಯಾಪಟ್ಟಣದ ಕಲ್ಕೆರೆ ಮಾರಮ್ಮ ಗ್ರಾಮದ ದೇವಸ್ಥಾನದಲ್ಲಿ ಕೋವಿಡ್ ಸೋಂಕು ನಿವಾರಣೆಗೆ ನೂರಾರು ಕೋಳಿಗಳನ್ನು ಬಲಿ ನೀಡಲಾಯಿತು. ಕೋವಿಡ್ ಪ್ರೇರಿತ ಲಾಕ್‍ಡೌನ್‍ನಿಂದಾಗಿ ಹಬ್ಬ, ಜಾತ್ರೆಗಳ ಆಚರಣೆಗೆ ಬ್ರೇಕ್ ಹಾಕಲಾಗಿದ್ದರೂ ನಿಯಮ ಉಲ್ಲಂಘಿಸಿ ಕೋಳಿ ಬಲಿ ನೀಡಲಾಗಿದೆ. ಗ್ರಾಮಸ್ಥರು ಕೋಳಿಯ ತಲೆ ಕತ್ತರಿಸಿ ಕೈನಲ್ಲಿ ಹಿಡಿದು ಸಾಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.