ಕೋವಿಡ್ ಹೊಡೆತ ಹೊಟೇಲ್ ಉದ್ಯಮ ನಷ್ಟದತ್ತ

ಆಲಮೇಲ:ಮೇ.5:ಕಳೆದ ವರ್ಷ ಕರೋನಾ ವೈರಸ್‍ನ ಅಬ್ಬರಕ್ಕೆ ಸಿಲುಕಿ ಹೊಟೇಲ್ ಉದ್ಯಮ ಸಂಪೂರ್ಣ ನೆಲಕಚ್ಚಿತ್ತು, ಸ್ವಲ್ಪ ಪ್ರಮಾಣದಲ್ಲಿ ಕೋವಿಡ್ ಸೋಂಕಿರತ ಸಂಖ್ಯೆ ಇಳಿಮುಖವಾಗಿ ಹೊಟೇಲ್ ಉದ್ಯಮ ಚೇತರಿಕೆ ಕಾಣುವಷ್ಟರಲ್ಲಿ ಮತ್ತೆ ಕರೋನಾದ 2ನೇ ಅಲೆ ತನ್ನ ರುದ್ರ ನರ್ತನವನ್ನು ತೋರಿಸುತ್ತಿರುವದರಿಂದ ಅದನ್ನು ತಡೆಯಲು ರಾಜ್ಯ ಸರಕಾರ 14 ದಿನಗಳ ಜನತಾ ಕಫ್ರ್ಯೂ ಜಾರಿಗೊಳಿಸಿದೆ 6ರಿಂದ 10ವರೆಗೆ ಪಾರ್ಸೆಲಗೆ ಅವಕಾಶ ನೀಡಿದ್ದರು ಜನ ಮಾತ್ರ ಹೊಟೇಲ್‍ನತ್ತ ಮುಖ ತೋರಿಸುತ್ತಿಲ್ಲ, ಹೊಟೇಲ್ ಊಟಕ್ಕಿಂತ ಮನೆ ಊಟ ಉತ್ತಮ ಎಂದು ಗ್ರಾಹಕರು ಹೊಟೇಲ್‍ಗೆ ಬರುತ್ತಿಲ್ಲ.ಇದು ಹೊಟೇಲ್ ಉದ್ಯಮಕ್ಕೆ ಮತ್ತೆ ಬಹುದೊಡ್ಡ ಹೊಡೆತವಾಗಿದೆ.

ಸಾರಿಗೆ ಮುಷ್ಕರದಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖ

ಜನತಾ ಕಫ್ರ್ಯೂಗಿಂತ ಮುಂಚೆ ಸಾರಿಗೆ ನೌಕರರು 15 ದಿನಗಳವರೆಗೆ ಮುಷ್ಕರ ಮಾಡಿದ್ದರಿಂದ ಆ ಸಂದರ್ಭದಲ್ಲಿ ವ್ಯಾಪಾರ ಸಂಪೂರ್ಣ ನೆಲಕಚ್ಚಿತ್ತು ಮತ್ತೆ ಕೋರ್ಟ್ ಮಧ್ಯೆ ಪ್ರವೇಶ ಮಾಡಿದ್ದರಿಂದ ಎರಡು ದಿನಗಳವರೆಗೆ ಬಸ್‍ನ ಪ್ರಯಾಣ ಪ್ರಾರಂಭವಾಗಿದೆ ಅನ್ನುವಷ್ಟರಲ್ಲಿ ರಾಜ್ಯ ಸರಕಾರ 14 ದಿನಗಳ ಜನತಾ ಕಫ್ರ್ಯೂ ಜಾರಿಗೊಳಿಸಿದೆ. ಎನ್ನುತ್ತಾರೆ ಕೆಎಸ್‍ಆರ್‍ಟಿಸಿ ಹೊಟೇಲ್ ಮಳಿಗೆದಾರರ ಜಿಲಾನಿ ಮಕಾನದಾರ.

ಮನೆ ಆಹಾರದತ್ತ ಜನರ ಒಲವು

ಜನತಾ ಕಫ್ರ್ಯೂ ಮಾರ್ಗಸೂಚಿಯಲ್ಲಿ ಸಡಿಲಿಕೆ ನೀಡಿರುವ ಸರಕಾರಿ ಮತ್ತು ಖಾಸಗಿ ಸಂಸ್ಥೆಯವರು, ತುರ್ತು ಸೇವೆಗಾಗಿ ಪ್ರಯಾಣ ಬೆಳೆಸುವವರು ಮನೆಗಳಿಂದ ಹೊರಡುವಾಗಲೇ ಅಗತ್ಯವಿರುವಷ್ಟು ಆಹಾರವನ್ನು ತಯಾರಿಸಿ ಜತೆಗೊಯ್ದು ವಾಹನದ ಒಳಗೆ ಕುಳಿತು ಸೇವಿಸುತ್ತಿದ್ದಾರೆ ಈ ಎಲ್ಲ ಅಂಶಗಳಿಂದ ಹೊಟೇಲ್ ಮಾಲಿಕರು ಕಂಗಾಲಾಗಿದ್ದಾರೆ.

ಸಾಲದ ಸುಳಿಯಲ್ಲಿ ಹೊಟೇಲ್ ಉದ್ಯಮ

ಗ್ರಾಹರಕ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದ್ದರೂ ಗ್ರಾಹಕರು ಹೊಟೇಲ್‍ಗಳತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ ಕಳೆದ ವರ್ಷದ ಕರೋನಾ ಅಲೆ ಕ್ಷೀಣಿಸುತ್ತಿದ್ದಂತೆ ಹೊಸದಾಗಿ ಹೊಟೇಲ್ ಉದ್ಯಮ ಆರಂಭಿಸಿದ್ದ ಯುವ ಉದ್ಯಮಗಳು ಸಾಲದ ಸುಳಿಗೆ ಸಿಲುಕಿದ್ದಾರೆ ಕಾರ್ಮಿಕರ ವೇತನ, ಬಾಡಿಗೆ, ಸಾಲದ ಕಂತು ಸೇರಿದಂತೆ ಪ್ರತಿ ತಿಂಗಳೂ ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ ಇದರಿಂದಾಗಿ ಹೊಟೇಲ್ ಮುಚ್ಚುವ ಸ್ಥಿತಿ ಎದುರಾಗಿದೆ.


ಹೊಟೇಲ್ ಉದ್ಯಮ ಈಗ ಮತ್ತೆ ನಷ್ಟದತ್ತ ಮುಖ ಮಾಡಿದೆ ಬಾಡಿಗೆ, ವಿದ್ಯುತ್ ಬಿಲ್. ಕಾರ್ಮಿಕರ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ, ಸರಕಾರ ಹೊಟೇಲ್‍ಗಳಲ್ಲಿ ಪಾರ್ಸೆಲ್ ನೀಡಲು ಅವಕಾಶ ನೀಡಿದ್ದರೂ ಗ್ರಾಹಕರು ಮಾತ್ರ ಊಟ ಸೇವಿಸಲು ಹಿಂದೆಟ್ಟು ಹಾಕುತ್ತಿದ್ದಾರೆ ಒಟ್ಟಾರೇ ಹೊಟೇಲ್ ಉದ್ಯಮ ಮಾತ್ರ ನಷ್ಟದಲ್ಲಿ ನಡೆಯುತ್ತಿದೆ.

ರುದ್ರಪ್ಪ ಹೂಗಾರ ವೈಭವ ಹೊಟೇಲ್ ಮಾಲೀಕ ಆಲಮೇಲ