ಕೋವಿಡ್ ಹೆಸರಿನಲ್ಲಿ ಲೂಟಿಗಿಳಿದ ಸರ್ಕಾರ: ಜಗದೇವ ಗುತ್ತೇದಾರ ಆರೋಪ

ಚಿಂಚೋಳಿ,ಮೇ.30- ಕೋವಿಡ್ 19 ಎರಡನೆ ಅಲೆಯ ಸೋಂಕು ನಿಯಂತ್ರಣ ಮತ್ತು ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರ ಕೋವಿಡ್ ಹೆಸರಿನಲ್ಲಿ ಹಣ ಲೂಟಿಯಲ್ಲಿ ತೊಡಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಆರೋಪಿಸಿದರು.
ತಾಲೂಕಿನ ಸೋಂಕಿತ ಜನಸಾಮಾನ್ಯರಿಂದ ಖಾಸಗಿ ಆಂಬುಲೆನ್ಸ್‍ಗಳು ಹೆಚ್ಚಿನ ದುಪ್ಪಟ್ಟು ಹಣ ಪಡೆಯುತ್ತಿರುವ ವಿಷಯವನ್ನರಿತ ಕಾಂಗ್ರೆಸ್ ಪಕ್ಷ, ಇಲ್ಲಿನ ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಪಕ್ಷದವತಿಯಿಂದ ಉಚಿತ ಅಂಬ್ಯುಲೆನ್ಸ್ ಸೇವೆಯನ್ನು ನೀಡಲು ಮುಂದಾಗಿದೆ.
ಈ ಉಚಿತ ಅಂಬ್ಯುಲೆನ್ಸ ಸೇವೆಯ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಅವರು, ಕೊರೊನಾ ಸೋಂಕು ತಡೆಗಟ್ಟುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೇವಲ ಕೊರೊನಾ ಸೋಂಕು ಹೆಸರು ಹೇಳಿಕೊಂಡು ಹಣದ ಲೂಟಿ ಮಾಡುತ್ತಿದ್ದಾರೆ.
ರಾಜ್ಯದ ಜನರು ಕೊರೊನಾ ಪ್ರಥಮ ಲಸಿಕೆ ಪಡೆದಿದ್ದಾರೆ ಆದರೆ ಎರಡನೇ ಲಸಿಕೆಗಾಗಿ ಪರದಾಡುತ್ತಿದ್ದಾರೆ ರಾಜ್ಯ ಸರ್ಕಾರವು ಕೊರೊನಾ ಎರಡನೇ ಲಸಕೆ ವಿತರಣೆ ಮಾಡಲು ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದ ಜನರಿಗಾಗಿ ವಿವಿಧ ಜಿಲ್ಲೆಯಲ್ಲಿ ಮತ್ತು ನಮ್ಮ ಕಲಬುರ್ಗಿ ಜಿಲ್ಲೆಯಲ್ಲಿ ಹಾಗೂ ತಾಲ್ಲೂಕಿನ ಜನರಿಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಉಚಿತ ಅಂಬುಲೆನ್ಸ್ ಸೇವೆ ಮತ್ತು ರೈತ ಬೆಳೆದ ತರಕಾರಿ ಹಣ್ಣುಗಳು ರೈತರಿಂದ ಖರೀದಿ ಮಾಡಿ ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದ್ದಾರೆ ಎಂದರು.
ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಡು ಬಡವರಿಗೆ ಪಕ್ಷದ ವತಿಯಿಂದ ಆಹಾರಕ್ಕೆ ಇಟ್ಟುಕೋ ಕೂಡ ವಿತರಣೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ. ಕಾಂಗ್ರೆಸ್ ಮುಖಂಡರು ಸುಭಾಷ್ ವ್ಹಿ.ರಾಠೋಡ್. ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಅನೀಲ್ ದೇವೀಂದ್ರಪ್ಪ ಜಮಾದಾರ್.ಕಾಂಗ್ರೆಸ್ ಪಕ್ಷದ ಮುಖಂಡರಾದ ಟಿ.ಟಿ. ಭೀಮರಾವ. ಬಸವರಾಜ ಮಲಿ. ಸೈಯೆದ್ ಶಬ್ಬೀರ್. ಶರಣು ಪಾಟೀಲ್ ಮೋತಕಪಳ್ಳಿ. ಅಬ್ದುಲ್ ಬಾಸಿದ. ಬಸವರಾಜ್ ಕಡಬೂರ್. ಮಲ್ಲಿಕಾರ್ಜುನ್ ಭೂಶೆಟ್ಟಿ. ಅಯೂಬ್ ಖಾನ್. ಗಂಗಾಧರ್ ಗಡ್ಡಿಮನಿ. ದೀಪಕ ಪುನಶೆಟ್ಟಿ. ವಿಜಯ್ಕುಮಾರ್ ಘಾಟ್ಗೆ ಗಂಗನಹಳ್ಳಿ. ಸಂತೋಷ್ ಗುತ್ತೇದಾರ್. ಉಲ್ಲಾಸ್ ಕೆರಳ್ಳಿ. ಜಗದೇವ್ ಗೌತಮ್. ಚಂದ ಪಾಶ. ನಾಗೇಶ್ ಗುಣಾಜಿ. ಅಬ್ದುಲ್ ಹಮೀದ್. ಕಲೀಲ್ ಪಟೇಲ್. ಶೇಕ್ ಫರೀದ್. ಶಂಕರ್ ಕುಸಾಲೆ. ಸುರೇಶ್ ದೇಶಪಾಂಡೆ. ಮತ್ತು ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.