ಕೋವಿಡ್ ಹೆಲ್ಪ್‌ಲೈನ್ ಸಭೆ, ವ್ಯಾಕ್ಸಿನ್ ವಿತರಣದಲ್ಲಿ ತಾರತಮ್ಯ, ತನಿಖೆಗೆ ಒತ್ತಾಯ

ಮಂಗಳೂರು, ಮೇ ೨೦-ದ.ಕ ಜಿಲ್ಲೆಯಲ್ಲಿ ವ್ಯಾಕ್ಸಿನ್ ಸರಬರಾಜು ಮಾಡುತ್ತಿದ್ದರೂ ಅದನ್ನು ಕೇವಲ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿ ಮಾತ್ರ ಎಂಬಂತೆ ಜನ ಮಾತಾಡುತ್ತಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ಪ್ರತಿ ದಿನ ಎಷ್ಟು ವ್ಯಾಕ್ಸಿನನ್ನು ಜಿಲ್ಲೆಗೆ ತರಲಾಗುತ್ತದೆ ಮತ್ತು ಎಷ್ಟು ಮಂದಿಗೆ ನೀಡಲಾಗುತ್ತದೆ ಈ ಬಗ್ಗೆ ಪ್ರಕಟಣೆ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ಮತ್ತು ಜಿಲ್ಲಾ ಆರೋಗ್ಯಧಿಕಾರಿಯನ್ನು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಐವನ್ ಡಿ ಸೋಜರವರು ವಹಿಸಿದ್ದರು. ಕೋವಿಡ್ ಮರಣಗಳು ಆಗುತ್ತಿದ್ದರೂ, ಮರಣಗಳ ಸಂಖ್ಯೆಯನ್ನು ನಿಖರವಾಗಿ ಹೇಳದೇ ಇರುವುದು ಅಧಿಕಾರಿಗಳ ಗಮನಕ್ಕೆ ತರಲು ತೀರ್ಮಾನಿಸಲಾಯಿತು. ಈ ಬಗ್ಗೆ ಗೊಂದಲವುಂಟಾಗಿದ್ದು, ಈ ಬಗ್ಗೆ ಯಾವ ಆಸ್ಪತ್ರೆಯಲ್ಲಿ ಎಷ್ಟು ದಾಖಲಾಗಿರುವರು? ಹಾಗೂ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಅತಿಯಾದ ಬಿಲ್ಲುಗಳನ್ನು ತೆಗೆದುಕೊಳ್ಳುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ನವೀನ್ ಡಿ ಸೋಜ, ಶಶಿಧರ ಹೆಗ್ಡೆ, ಮೊಹಮ್ಮದ್ ಕುಂಜತ್ತ್ ಬೈಲ್, ಕುಮಾರಿ ಅಪ್ಪಿ, ಭಾಸ್ಕರ್ ರಾವ್, ಅಶಿತ್ ಪಿರೇರಾ, ಆರೀಫ್, ದೀಕ್ಷಿತ್ ಅತ್ತಾವರ, ಪ್ರವೀಣ್ ಜೇಮ್ಸ್, ಸಲೀಂ, ಮನುರಾಜ್, ಮಹೇಶ್ ಕೋಡಿಕಲ್, ಇಮ್ರಾನ್, ಸತೀಶ್ ಪೆಂಗಳ್, ಮೀನಾ, ಯೂಸೂಫ್ ಉಚ್ಛಿಲ್, ಹಸನ್ ಪಾಂಡೇಶ್ವರ, ದುರ್ಗಾಪ್ರಸಾದ್, ಪವಿತ್ರ ಕರ್ಕೆರ, ಆನಂದ್ ಸೋನ್ಸ್, ಪಿಯುಸ್ ಮೊಂತೆರೊ, ಫಯಾಜ್ ಪರಂಗಿಪೇಟೆ, ಬಾಜಿಲ್, ಅಬಿಬುಲ್ಲ ಕಣ್ಣೂರು ಮುಂತಾದವರು ಉಪಸ್ಥಿತರಿದ್ದರು.