
ಪುಣೆ, ಏ.೧೩-ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಸಂಖ್ಯೆಗೆ ಅನುಗುಣವಾಗಿ ಪುಣೆಯ ಭಾರತೀಯ ಸೆರಂ ಸಂಸ್ಥೆ ಲಸಿಕೆ ಅಭಿವೃದ್ದಿ ಮಾಡಲು ಮುಂದಾಗಿದೆ.
ಸೆರಂ ಸಂಸ್ಥೆ ಕೋವಿಡ್ -೧೯ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯನ್ನು ಪುನರಾರಂಭಿಸಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆಧಾರ್ ಪೂನಾವಾಲಾ ತಿಳಿಸಿದ್ದಾರೆ.
ಕಂಪನಿಯು ಆರು ದಶಲಕ್ಷ ಡೋಸ್ ಕೋವೊವಾಕ್ಸ್ ಲಸಿಕೆಗಳನ್ನು ಹೊಂದಿದೆ, ಇದು ಬೇಡಿಕೆಗೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ ಮತ್ತು ಇದನ್ನು ಹೆಟೆರೊಲಾಜಸ್ ಬೂಸ್ಟರ್ ಡೋಸ್‌ಗಳಾಗಿಯೂ ಬಳಸಬಹುದು ಎಂದು ತಿಳಿಸಿದ್ದಾರೆ.
ಜನರು ಆಯ್ಕೆ ಮಾಡಿದರೆ ಕೋವಿಶೀಲ್ಡ್ ಆಯ್ಕೆಯನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಕಂಪನಿ ಈ ಕ್ರಮವನ್ನು ತೆಗೆದುಕೊಂಡಿದೆ, ”ಎಂದು ಹೇಳಿದ್ದಾರೆ. ಮೂರು ತಿಂಗಳೊಳಗೆ ೬-೭ ದಶಲಕ್ಷ ಡೋಸ್ ಕೋವಿಶೀಲ್ಡ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಸೆರಂ ಸಂಸ್ಥೆ ಹೊಂದಿದೆ . ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಸ್ಥಗಿತ: ಪುನರಾರಂಭ ದೇಶದಲ್ಲಿ ಕೋವಿಡ್ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆ ಕಡಿಮೆ ಮಾಡಲಾಗಿತ್ತು. ಇದೀಗ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಸಿಕೆ ಉತ್ಪಾದನೆ ಮಾಡಲಾಗುತ್ತಿದೆ ಎಂದು ಆದಾರ್ ಪೂನಾವಾಲ ಹೇಳಿದ್ದಾರೆ. ಸಾಕಷ್ಟು ಸ್ಟಾಕ್‌ಗಳಿದ್ದ ಕಾರಣ ಸೆರಂ ಸಂಸ್ಥೆ ಒಂದು ವರ್ಷದ ಹಿಂದೆ ಕೋವಿಶೀಲ್ಡ್ ಉತ್ಪಾದನೆ ನಿಲ್ಲಿಸಿತ್ತು. ಮತ್ತು ಕೆಲವರು ಮಾತ್ರ ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.