ಕೋವಿಡ್ ಹಿನ್ನೆಲೆ ಬಳ್ಳಾರಿ ಜಿಲ್ಲೆಯಾದ್ಯಂತ ಜಾತ್ರಾ ಮಹೋತ್ಸವಗಳ ನಿಷೇಧ

ONE OF FAMOUS SRI SHIDDARODHA MATH SWAMI JATRA MAHOTSAV CELEBRATED VERY GRAND IN HUBLI AND SO MANY STATES DEVOTEES PARTICIPATED IN ALSO SOME FOREIGHNERS ALSO ON THIS YEAR FIRST TIME HELICAPTER (SPRAY) SHOWERS THE FLOWERS ON MATH TEMPLE AND RATH AROUND MORE THAN TWANTY TIME WHEN CAR FESTIVAL PULLING START BY DEVOTEES WITH CHANTING OM NAMA SHIVAYA ,,,,,,,,,,,HARA HARA MAHADEVA.....,,,, BOLO SRI SHIDDARODH MAHARAJKI JAI ,,,,,ETC KIRAN BAKALE- PTI-HUBLI

ಬಳ್ಳಾರಿ,ಏ.17: ಜಿಲ್ಲೆಯಲ್ಲಿ ಕೋವಿಡ್ ಹರಡದಂತೆ ಸಾರ್ವಜನಿಕರ ಮತ್ತು ಭಕ್ತಾದಿಗಳ ಆರೋಗ್ಯ ಕಾಪಾಡಲು ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ರಥೋತ್ಸವ,ಜಾತ್ರಾಮಹೋತ್ಸವ,ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯನ್ನು ನಿಷೇಧಿಸಿ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ಮೇ 31ರವರೆಗೆ ನಿಷೇಧಿಸಿ ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಮೇ 27ರವರೆಗೆ ವಿವಿಧ ದೇವಸ್ಥಾನಗಳಲ್ಲಿ ರಥೋತ್ಸವ,ಜಾತ್ರಾ ಮಹೋತ್ಸವ,ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಎರಡು ದಿನಗಳ ಹಿಂದೆ ಹಾಗೂ ಎರಡು ದಿನಗಳ ನಂತರ ದೇವಸ್ಥಾನವನ್ನು ಮುಚ್ಚಲು ಸಂಬಂಧಪಟ್ಟ ದೇವಸ್ಥಾನಗಳ ಉಸ್ತುವಾರಿಗಳಿಗೆ ಸೂಚಿಸಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಆದೇಶವನ್ನು ಯಾವುದೇ ವ್ಯಕ್ತಿ/ವ್ಯಕ್ತಿಗಳು ಉಲ್ಲಂಘಿಸಿದ ಪಕ್ಷದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅನುಸಾರ ಕ್ರಮಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.