ಕೋವಿಡ್ ಹಿನ್ನಲೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ: ಕಾಂಗ್ರೆಸ್ ಆಕ್ರೋಶ

ಚಿಂಚೋಳಿ,ಏ.30- ಕೋವಿಡ್ ಹಿನ್ನಲೆಯಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಬೆಲೆ ಮತ್ತು ಕೋವಿಡ್‍ನಿಯಂತ್ರಣ ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶರಣು ಪಾಟೀಲ ಮೋತಕಪಲ್ಲಿ ಅವರು ಆರೋಪಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು, ತಾಲೂಕಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಅತಿ ವೇಗದಲ್ಲಿ ಹರಡಿ ಸಾರ್ವಜನಿಕ ಜೀವನಕ್ಕೆ ಮಾರಕ ಆಗುತ್ತಿರುವ ಹಿನ್ನೆಲೆ ಲಾಕ್‍ಡೌನ್ ಘೋಷಿಸಿದ್ದು, ಇದರಿಂದ ಇಲ್ಲಿನ ವರ್ತಕರು ಬೇಕಾಬಿಟ್ಟಿಯಾಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದರು.
ಕೃತಕ ಅಭಾವ ಸೃಷ್ಟಿಸುವ ವ್ಯಾಪಾರಿಗಳು, ಜನರ ಸಂಕಷ್ಟವನ್ನೇ ಬಂಡವಾಳವನ್ನಾಗಿ ಮಾಡಿ ಅವರ ಸೊಲಿಗೆಯಲ್ಲಿ ತೊಡಗಿದ್ದಾರೆ. ಮನಸೋ ಇಚ್ಛೆ ಲೂಟಿ ಮಾಡುತ್ತಿದ್ದಾರೆ. ಜನ ಕೆಲಸ ಗಳಿಕೆ ಇಲ್ಲದೆ ಜೀವನ ನಡೆಸಲು ಪರದಾಡುತ್ತಿರುವ ಸಮಯದಲ್ಲಿ ದಿನದ ಊಟಕ್ಕೆ ಬೇಕಾಗುವ ಸಾಮಗ್ರಿಗಳು ಖರೀದಿಸಲು ಸಾರ್ವಜನಿಕರು ಅಂಗಡಿಗೆ ಹೋದ ಜನಸಾಮಾನ್ಯರು ಬೆಲೆ ಕೇಳಿ ಕಣ್ಣೀರು ಸುರಿಸುವಂತಾಗಿದೆ ಎಂದರು.
ವ್ಯಾಪಾರಸ್ಥರು ಜನರ ರಕ್ತ ಹಿರುತ್ತಿದ್ದಾರೆ ಇನ್ನು ಗುಟ್ಕಾ, ಸಿಗರೇಟ್ ಬೆಲೆ ಅಂತೂ ಹೇಳತೀರದು, ಅತಿ ದುಬಾರಿ ದರದಲ್ಲಿ ಮಾರುತ್ತಿದ್ದಾರೆ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಚಿಂಚೋಳಿಯ ತಹಸೀಲ್ದಾರರು ಹಾಗೂ ಚಿಂಚೋಳಿಯ ಆಹಾರ ನಾಗರಿಕರ ಇಲಾಖೆಯ ಅಧಿಕಾರಿಗಳು ಈ ಕುರಿತು ಮುತುವರ್ಜಿ ವಹಿಸಿ ದುಪ್ಪಟ್ಟು ಬೆಲೆಯ ಕಳ್ಳಸಂತೆ ತೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾರ್ವಜನಿಕರಿಗೆ ಈ ಬೆಲೆ ಏರಿಕೆ ಹೊಡೆತದಿಂದ ಕಾಪಾಡಬೇಕು. ಇದೆ ಪರಿಸ್ಥಿತಿ ಮುಂದುವರಿದರೆ ಜನ ತಿನ್ನುವ ಅನ್ನಾನೂ ಸಿಗದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಹಣವಂತರು ಹೇಗೋ ಬದುಕುತ್ತಾರೆ ಆದರೆ ಬಡವರ ಪಾಡು ಬಹಳ ಕಷ್ಟ ವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಇತ್ತ ಗಮನ ಹರಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.