ಕೋವಿಡ್ ಸ್ಥಿತಿ ಗತಿಯ ಬಗ್ಗೆ ಚರ್ಚೆ

ಬೆಂಗಳೂರು, ಜೂ.೧೦- ರಾಜ್ಯ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣರ ವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬೇಟಿ ಮಾಡಿ ಪ್ರಸ್ತುತ ತಾಲೂಕಿನ ಕೋವಿಡ್ ಸ್ಥಿತಿ ಗತಿಯ ಬಗ್ಗೆ ಚರ್ಚಿಸಿದರು.ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಬಂಟ್ವಾಳ ತಾಲೂಕಿನ ಅಧಿಕಾರಿಗಳ ತಂಡದ ಕಾರ್ಯವೈಖರಿ, ಮತ್ತು ನಿಯಂತ್ರಣ ಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು. ತಾಲೂಕಿನಲ್ಲಿ ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಯಾವುದೇ ಸಮಸ್ಯೆ ಯಾಗದಂತೆ ನಿರ್ವಹಿಸದ ಬಗ್ಗೆ ಯೂ ಮಾಹಿತಿ ನೀಡಲಾಯಿತು. ಕೋವಿಡ್ ನಿರ್ವಹಣೆ ಮತ್ತು ಈ ಸಂದರ್ಭದಲ್ಲಿ ಶಾಸಕರ ಕಾರ್ಯ ನಿರ್ವಹಣೆ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಶಾಸಕರ ಆಪ್ತ ಕಾರ್ಯದರ್ಶಿ ಪವನ್ ಕುಮಾರ್ ಹಾಜರಿದ್ದರು.