ಕೋವಿಡ್ ಸ್ಥಿತಿಗತಿ: ಆನಂದ್ ಸಿಂಗ್ ಪರಾಮರ್ಶೆ

ಬಳ್ಳಾರಿ ಏ 24 : ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ. ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾಧಿಕಾರಿ ಮಾಲಪಾಟಿ, ಎಸ್ಪಿ. ಅಡಾವತ್, ಜಿಪಂ ಸಿಇಓ ನಂದಿನಿ, ಡಿಹೆಚ್ಓ ಜನಾರ್ಧನ, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಎಸಿ ರಮೇಶ್ ಕೋನ ರೆಡ್ಡಿ ಮೊದಲಾದವರು ಇದ್ದರು.