ಕೋವಿಡ್ ಸೋಂಕಿನ ಎರಡನೇ ಅಲೆ ಪರಿಣಾಮ: ಕಲಬುರಗಿ ನಗರದಲ್ಲಿ ರಾತ್ರಿ ಮತ್ತು ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿ ಪೊಲೀಸ್ ಆಯುಕ್ತರ ಆದೇಶ

ಕಲಬುರಗಿ.ಏ.21: ಕೋವಿಡ್ ಎರಡನೇ ಅಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೊಸ ಕೋವಿಡ್ ಮಾರ್ಗಸೂಚಿಯಂತೆ ಕಲಬುರಗಿ ನಗರದಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144 ರನ್ವಯ ಇದೇ ಏಪ್ರಿಲ್ 21 ರಿಂದ ಮೇ 4 ರವರೆಗೆ ಒಟ್ಟು 14 ದಿನಗಳ ಕಾಲ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ವರೆಗೆ ನೈಟ್ (ರಾತ್ರಿ) ಕಫ್ರ್ಯೂ ಹಾಗೂ ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆ ವರೆಗೆ ವೀಕೆಂಡ್ ಕಫ್ರ್ಯೂ ಈ ಕೆಳಕಂಡ ಷರತ್ತಿಗೊಳಪಟ್ಟು ಜಾರಿಗೊಳಿಸಿ ಕಲಬುರಗಿ ನಗರ ಪೆÇಲೀಸ್ ಆಯುಕ್ತ ಎನ್. ಸತೀಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಈ ಅವಧಿಯ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ 4 ಕ್ಕಿಂತ ಹೆಚ್ಚಿನ ಜನರ ಗುಂಪು ಸೇರುವುದನ್ನು ನಿಷೇಧಿಸಿದೆ. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಮತ್ತು ಐ.ಪಿ.ಸಿ. ಕಲಂ 188 ರನ್ವಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಎನ್.ಸತೀಷಕುಮಾರ ಅವರು ಎಚ್ಚರಿಕೆ ನೀಡಿದ್ದಾರೆ.
ನೈಟ್ ಕಫ್ರ್ಯೂನ ಮಾರ್ಗಸೂಚಿ: ನೈಟ್ ಕಫ್ರ್ಯೂ ಅವಧಿಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ವೈಯಕ್ತಿಕವಾಗಿ ಅತ್ಯವಶ್ಯಕ ಚಟುವಟಿಕೆಗಳಿಗೆ ಹೊರತುಪಡಿಸಿ ಸಂಚರಿಸುವುದನ್ನು ನಿμÉೀಧಿಸಿದೆ. ರೋಗಿಗಳು ಹಾಗೂ ಅವರ ಸಹಾಯಕರಿಗೆ ತುರ್ತು ಸಂದರ್ಭದಲ್ಲಿ ಸಂಚರಿಸಲು ಅನುಮತಿಸಿದೆ. ನೌಕರರು, ಇಂಟರ್‍ನೆಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ. ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ. ಇದಲ್ಲದೆ ಎಲ್ಲಾ ಕೈಗಾರಿಕಾ ಕಂಪನಿಗಳಲ್ಲಿ ರಾತ್ರಿ ಪಾಳೆಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೂ ಸಂಚಾರಕ್ಕೆ ಅನುಮತಿ ನೀಡಿದ್ದು, ನೌಕರ ವರ್ಗದವರು ಕಂಪನಿ/ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.
ಇದಲ್ಲದೆ ಆರೋಗ್ಯ ಮತ್ತು ತುರ್ತು ಸೇವೆ ಒದಗಿಸುವ ಔಷಧ ಅಂಗಡಿಗಳು, ಆರೋಗ್ಯ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸತಕ್ಕದ್ದು, ಇತರೆ ಔದ್ಯಮಿಕ ಚಟುವಟಿಕೆಗಳು ನಿμÉೀಧಿಸಿದೆ. ಸರಕು ಸಾಗಾಣಿಕೆಗಳಿಂದ ತುಂಬಿರುವ ವಾಹನಗಳು, ಹೋಮ್ ಡಿಲೇವರಿ ಮಾಡುವ ವಾಹನಗಳು, ಇ-ಕಾಮರ್ಸ್ ಕಂಪನಿಯ ವಾಹನಗಳು, ಟೆಲಿಕಾಂ ಸಂಸ್ಥೆಯ ವಾಹನಗಳು ಸಂಚಾರಕ್ಕೆ ಅನುಮತಿಸಿದೆ. ಇದಲ್ಲದೆ ರಾತ್ರಿಯಲ್ಲಿ ದೂರ ಪ್ರಯಾಣದ ಬಸ್ ಸೇವೆ, ರೈಲು ಹಾಗೂ ವಿಮಾನ ಸಂಚಾರಕ್ಕೆ ಅನುಮತಿಸಿರುವ ಕಾರಣ ಇದರಲ್ಲಿ ಪ್ರಯಾಣ ಕೈಗೊಳ್ಳುವವರಿಗೆ ವೈಯಕ್ತಿಕ, ಸಾರ್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಅನುಮತಿಸಿದ್ದು, ಪ್ರಯಾಣದ ಟಿಕೆಟ್ ಕಡ್ಡಾಯವಾಗಿ ತೋರಿಸಬೇಕಾಗುತ್ತದೆ.
ವಿಕೆಂಡ್ ಕಫ್ರ್ರ್ಯೂ ಮಾರ್ಗಸೂಚಿಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರಿ ವಲಯಗಳಲ್ಲಿ ಹಾಗೂ ಕೋವಿಡ್-19 ತುರ್ತು ಪರಿಸ್ಥಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂದಿಗಳಿಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಎಲ್ಲಾ ಕೈಗಾರಿಕಾ ಕಂಪನಿ, ಸಂಸ್ಥೆ, ತುರ್ತು ಸೇವೆ ಒದಗಿಸುವ ಸಂಸ್ಥೆಗಳಿಗೆ 24 ಗಂಟೆ ಕೆಲಸ ನಿರ್ವಹಿಸಲು ನೌಕರರಿಗೆ ಅನುಮತಿಸಿದೆ. ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್‍ನೆಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ. ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದ್ದು, ಕೆಲಸ ನಿರ್ವಹಿಸುವ ಸಂಸ್ಥೆಯಿಂದ ನೀಡಲಾದ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.
ರೋಗಿಗಳು ಹಾಗೂ ಅವರ ಸಹಾಯಕರಿಗೆ, ಸಂಬಂಧಿಗಳಿಗೆ ತುರ್ತು ಸಂದರ್ಭದಲ್ಲಿ ಹಾಗೂ ವ್ಯಾಕ್ಸಿನೇಶನ್ ಪಡೆಯಲು ತೆರಳುವ ಸಾರ್ವಜನಿಕರಿಗೆ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಸಾರ್ವಜನಿಕರಿಗೆ ಅವಶ್ಯಕವಾಗಿರುವ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ, ಹಣ್ಣು, ತರಕಾರಿ, ಹಾಲು, ಮಾಂಸ ಹಾಗೂ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅತ್ಯವಶ್ಯಕ ವಸ್ತುಗಳನ್ನು ಹೋಮ್ ಡಿಲೆವರಿ ಮಾಡಲು ಕೋವಿಡ್-19 ನಿಯಮಾವಳಿ ಪಾಲನೆಯೊಂದಿಗೆ ಅನುಮತಿಸಿದೆ.
ರೆಸ್ಟಾರೆಂಟ್ ಮತ್ತು ಹೋಟೆಲ್‍ಗಳಲ್ಲಿ ಪಾರ್ಸಲ್ ವ್ಯವಸ್ಥೆ ಹಾಗೂ ಹೋಮ ಡಿಲೆವರಿಗೆ ಅನುಮತಿಸಿದೆ. ರಾತ್ರಿಯಲ್ಲಿ ದೂರ ಪ್ರಯಾಣದ ಬಸ್ ಸೇವೆ, ರೈಲು ಹಾಗೂ ವಿಮಾನ ಸಂಚಾರಕ್ಕೆ ಅನುಮತಿಸಿದ್ದು, ಇಂತಹ ಪ್ರಯಾಣಿಕರಿಗೆ ವೈಯಕ್ತಿಕ, ಸಾರ್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಕೋವಿಡ್-19 ನಿಯಮಾವಳಿಯನ್ವಯ ಅನುಮತಿ ನೀಡಲಾಗಿದೆ. ಪ್ರವಾಸದ ಸಂದರ್ಭದಲ್ಲಿ ಪ್ರಯಾಣದ ಟಿಕೆಟ್ ಕಡ್ಡಾಯವಾಗಿ ಹೊಂದಿರಲೇಬೇಕು.
ಮದುವೆ ಸಮಾರಂಭಗಳಿಗೆ 50 ಜನರು ಮೀರದಂತೆ ಮತ್ತು ಅಂತ್ಯಕ್ರಿಯೆ/ ಶವಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚಿನ ಜನರು ಮೀರದಂತೆ ಕೋವಿಡ್-19 ಮಾರ್ಗಸೂಚಿ ಷರತ್ತಿಗೊಳಪಟ್ಟು ಅನುಮತಿಸಿದೆ. ಎಲ್ಲಾ ಚಿತ್ರಮಂದಿರಗಳು, ಶಾಪಿಂಗ್ ಮಾಲ್, ಜಿಮ್ ಕೇಂದ್ರಗಳು, ಸ್ಪೋಟ್ರ್ಸ್ ಕಾಂಪ್ಲೆಕ್ಸ್, ಸ್ವಿಮಿಂಗ್ ಪೂಲ್ಸ್, ಮನೋರಂಜನೆ ಪಾರ್ಕ್‍ಗಳು, ಬಾರ್ ಮತ್ತು ಅಡಿಟೋರಿಯಮ್ಸ್, ಅಸೆಂಬ್ಲಿ ಹಾಲ್‍ಗಳು ಮುಚ್ಚುವಂತೆ ಸೂಚಿಸಲಾಗಿದೆ. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕøತಿಕ, ಧಾರ್ಮಿಕ ಹಾಗೂ ಇತರೆ ಜನದಟ್ಟನೆಯಿಂದ ಕೂಡುವ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿμÉೀಧಿಸಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪೂಜೆ ಮಾಡುವುದನ್ನು ನಿμÉೀಧಿಸಿದ್ದು, ದಿನ ನಿತ್ಯದ ಧಾರ್ಮಿಕ ಪೂಜೆ ಕಾರ್ಯಕ್ರಮಗಳನ್ನು ಸಾರ್ವಜನಿಕರು ಇಲ್ಲದೆ ಮುಂದುವರೆಸಲು ಅನುವು ಮಾಡಿಕೊಡಲಾಗಿದೆ. ಕಟ್ಟಡ ಚಟುವಟಿಕೆಗಳನ್ನು ನಿμÉೀಧಿಸಲಾಗಿದೆ.