ಕೋವಿಡ್ ಸೋಂಕಿತ ಸಂಬಂಧಿಗೆ ಸ್ಪಂದಿಸಿದ ಸಚಿವರು

ಬೀದರ:ಮೇ.1: ಕೋವಿಡ್-19 ಸೋಂಕಿತ ಸಂಬಂಧಿ ವ್ಯಕ್ತಿಯ ಅಹವಾಲಿಗೆ
ಪಶು ಸಂಗೋಪನೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ತಕ್ಷಣ ಸ್ಪಂದಿಸಿ, ಅವರಿಗೆ ಅನುಕೂಲ ಕಲ್ಪಿಸಿದರು.
ಬೀದರ ಜಿಲ್ಲೆಯಲ್ಲಿ ಜನತಾ ಕಫ್ರ್ಯೂ ನಿಯಮಗಳ ಪಾಲನೆಯ ಬಗ್ಗೆ ತಿಳಿಯಲು ಮತ್ತು ಸಾರ್ವಜನಿರಲ್ಲಿ ಮನವಿ ಮಾಡಲು ಸಚಿವರು ಖುದ್ದು ಏಪ್ರೀಲ್ 29ರಂದು ನಗರ ಸಂಚಾರ ಕೈಗೊಂಡ ವೇಳೆಯಲ್ಲಿ ಬೀದರ ನಗರದ ಹೊಸ ಬಸ್ ನಿಲ್ದಾಣದ ಬಳಿಯಲ್ಲಿ ಸಚಿವರ ಬಳಿಗೆ ಬಂದ ವ್ಯಕ್ತಿಯೊಬ್ಬರು, ತಮಗೆ ಬೀದರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಕಾಲಕ್ಕೆ ಇಂಜೆಕ್ಷನ್ ಕೊಡುತ್ತಿಲ್ಲ. ತಾವು ತಿಳಿಸಿರಿ ಎಂದು ಸಚಿವರಲ್ಲಿ ಪರಿಪರಿಯಾಗಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವರು, ಕೂಡಲೇ ದೂರವಾಣಿ ಮೂಲಕ ಖಾಸಗಿ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ, ಅವರಿಗೆ ಕೂಡಲೇ ಅನುಕೂಲ ಕಲ್ಪಿಸಿಕೊಡಲು ಸೂಚಿಸಿದರು.
ಧನ್ಯವಾದ ಹೇಳಿದ ರೋಗಿಯ ಸಂಬಂಧಿ: ತಾವು ವಿಷಯ ತಿಳಿಸಿದ ಕೂಡಲೇ ಸಚಿವರು ಸ್ಪಂದಿಸಿ, ತಕ್ಷಣವೇ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಮಾತನಾಡಿ ನಮಗೆ ಸಹಾಯ ಮಾಡಿದ್ದಾರೆ ಎಂದು, ಕೋವಿಡ್ ರೋಗಿಯ ಸಂಬಂಧಿ ವ್ಯಕ್ತಿಯು ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.