ಕೋವಿಡ್ ಸೋಂಕಿತರ ನೆರವಿಗೆ ವಸಂತರಾಜ ಸಹಾಯ ಹಸ್ತ

ಬೆಂಗಳೂರು.ಮೇ.೦೫: ೨೦೨೦ರ ಆರಂಭದಿಂದ ಕೋವಿಡ್ ಮಹಾಮಾರಿ ಇಡೀ ಜಗತ್ತನ್ನೇ ಹಿಂಡಿ ಹಿಪ್ಪೆಯಾಗಿಸಿದಂತೆ ಭಾರತೀಯರ ಪಾಲಿಗೂ ಇದು ಮಹಾ ಕಂಟಕಪ್ರಾಯವಾಗಿ ಪರಿಣಮಿಸಿದೆ. ಕರ್ನಾಟಕವನ್ನು ಸಹ ತಿಂದು ತೇಗುತ್ತಿರುವ ಕೊರೋನಾ ತನ್ನ ಎರಡನೇ ಅಲೆಯಲ್ಲಂತೂ ಜೋರು ಹಿಡಿದಿದೆ.
ಅದರಲ್ಲೂ ರಾಜ್ಯ ರಾಜ್ಯಧಾನಿ ಬೆಂಗಳೂರಿಗರ ಪಾಲಿಗೆ ಕೋವಿಡ್ ಎರಡನೇ ಅಲೆ ಮೃತ್ಯುಕೂಪವಾಗಿ ನಿಂತಿದ್ದು ದಿನಾಲು ನೂರಾರು ಜೀವಗಳ ಬಲಿ ಪಡೆಯುತ್ತಿದೆ. ಆದರೂ ಕೆಲವರು ಮಹಾತ್ಮರು ತಮ್ಮ ಕೈಲಾದಷ್ಟು ಅಸಹಾಯಕರಿಗೆ ಸಹಾಯ ಹಸ್ತ ಚಾಚಿ ಅವರಿಗೆ ಆಸರೆಯಾಗಿ, ತಮ್ಮ ಕೈಲಾದಷ್ಟು ಸಹಾಯ ಸಹಕಾರ ಮಾಡಿದ ಮಹನಿಯರಲ್ಲಿ ಬೆಂಗಳೂರು ಮಹಾನಗರದ ಬಿಜೆಪಿ ಮುಖಂಡ ವಸಂತರಾಜ ಹಾವೇರಿ ಮೊದಲಿಗರು.
ಮೇ ೦೫ ೧೯೮೫ರಲ್ಲಿ ಬಿ.ಎ ಎಲ್.ಎಲ್.ಬಿ ಪದವಿ ಪಡೆದ ವಸಂತರಾಜ ಹಾವೇರಿ ಅವರ ಜನನವಾಯಿತು. ತಂದೆ ಬಸವರಾಜ ಹಾವೇರಿ ಅವರ ಸುಪುತ್ರರಾದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕರೋನ ಸಮಯದಲ್ಲಿ ಈ ಕೆಳಗಿನ ಕೆಲಸಗಳನ್ನು ಮಾಡಿರುತ್ತಾರೆ
೧.ಶಿವನಗರ ವಾರ್ಡಿನಲ್ಲಿ ರೇ?ನ್ ಕಿಟ್ ವಿತರಣೆ,
೨.ಮಂಡಲದ ಮಾರ್ಗದರ್ಶನದಲ್ಲಿ ೫೦ ಮೂಟೆ ಅಕ್ಕಿ ವಿತರಿಸಲಾಯಿತು..
೩.ವಾರ್ಡಿನ ಮನೆ ಮನೆಗೆ ಭೇಟಿ ನೀಡಿ ಬಡವರನ್ನು ಹಾಗೂ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಊಟದ ಪ್ಯಾಕೆಟನ್ನು ವಿತರಿಸಿದರು.
೪.ಕರೋನ ಹೆಚ್ಚಿರುವ ಸಮಯದಲ್ಲಿ ಅವರ ಪತ್ನಿ ಡಾ. ಸುಪ್ರಿಯಾ ಅವರ ಜೊತೆಗೂಡಿ ಮಂಡಲದ ಸುಮಾರು ೭೦೦ ಮನೆಗಳಿಗೆ ತರಳಿ ಜನರಲ್ ಚೆಕಪ್ ಮಾಡಿ ಉಚಿತ ಔ?ಧಿ ವಿತರಿಸಲಾಯಿತು.
೫.ಕೊರೋನಾ ಸಮಯದಲ್ಲಿ ಕರೋನದಿಂದ ಮರಣ ಹೊಂದಿದ ಶವವನ್ನು ನೋಡಲು ಬಾರದ ಸಮಯದಲ್ಲಿ ಅನಾಥ ಶವ ಸಂಸ್ಕಾರ ಮಾಡಲಾಯಿತು.
೬.೧೨೦ ಕ್ಕೂ ಹೆಚ್ಚು ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡುವ ಪ್ರಾಮಾಣಿಕ ಕೆಲಸ ಮಾಡಿ ಸುಮಾರು ೭ ಲಕ್ಷದ ವರೆಗೂ ಅಸ್ಪತ್ರೆಯ ಬಿಲ್ಲನ್ನು ರಿಯಾಯತಿ ಮಾಡಿಸಲಾಯಿತು.
೭.ವಾರ್ಡಿನಲ್ಲಿ ಕರೋನ ಬಂದ ಪರಿಸರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಿ ಅನೇಕ ಮನೆಯವರನ್ನು ಸುರಕ್ಷಿತವಾಗಿ ಹೋಮ್ ಕ್ವಾರಂಟೈನ್ ಇರುವಂತೆ ಮಾಡಿ ಹಲವು ರಸ್ತೆಗಳನ್ನು ಬಿಬಿಎಂಪಿಯವರ ಮೂಲಕ ಬಂದ್ ಮಾಡಿಸಲಾಯಿತು.
೮.ಹಲವು ಮುಖ್ಯ ಸ್ಥಳಗಳಲ್ಲಿ ಉದಾಹರಣೆಗೆ ಸಿದ್ಧಗಂಗಾ ಚೌಲ್ಟರಿಯಲ್ಲಿ ಹೆಚ್ಚಿನ ಒಟ್ಟು ಜನರಿಗೆ ಉಚಿತವಾಗಿ ಕರೋನಾ ಟೆಸ್ಟ್ ಮಾಡಿಸಲಾಯಿತು.
೮.ಅನೇಕ ಆಸ್ಪತ್ರೆಯ ಡಾ ಭೇಟಿ ಮಾಡಿ ಕರೋನ ಮತ್ತು ಮುತುವರ್ಜಿ ನೀಡಲು ಸೂಚಿಸಲಾಯಿತು.
ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಮಾಡಿರುವ ವಸಂತರಾಜ ಹಾವೇರಿ ಅವರ ಪ್ರಾಮಾಣಿಕ ಕಾಳಜಿಗೆ ಸಂಜೆವಾಣಿ ಹ್ಯಾಟ್ಸಾಪ್ ಹೇಳುವ ಮೂಲಕ ಅವರ ೩೬ನೇ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಷಯ ಕೋರುತ್ತೇವೆ.