ಕೋವಿಡ್ ಸೋಂಕಿತರ ಚಿಕಿತ್ಸೆಗೆ ಔಷಧ ಕೊರತೆಯಿಲ್ಲ ಖಾಸಗಿ ಆಸ್ಪತ್ರೆ ಐಸಿಯು ಬೆಡ್ ಸಂಖ್ಯೆ ದ್ವಿಗುಣ:ಜಿಲ್ಲಾಧಿಕಾರಿ ವಿಜಯಾ ವಾಸಿರೆಡ್ಡಿ ಜ್ಯೋತ್ಸ್ನಾ

ಕಲಬುರಗಿ,ಏ.16:ಕರೊನಾ ಸೋಂಕಿತರಿಗೆ ಐಸಿಯು ಬೆಡ್‍ಗಳ ಕೊರತೆ ನೀಗಿಸಲು ಖಾಸಗಿ ಆಸ್ಪತ್ರೆಗಳಲ್ಲಿ ಈಗ ಲಭ್ಯವಿರುವ ಐಸಿಯು ಬೆಡ್‍ಗಳ ಸಂಖ್ಯೆಯನ್ನು ದ್ವಿಗುಣ (ಡಬಲ್) ಮಾಡಲಾಗುವುದು. ಅಲ್ಲದೆ ಸರ್ಕಾರಿ ಆಸ್ಪತ್ರೆ ಚಿಕಿತ್ಸೆ ನೀಡಲು ಖಾಸಗಿ ವೈದ್ಯರನ್ನು ಸಹ ಬಳಕೆ ಮಾಡಿಕೊಳ್ಳವುದರ ಜತೆಗೆ ಅಗತ್ಯವಾದಲ್ಲಿ ನರ್ಸಿಂಗ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿಜಯಾ ವಾಸಿರೆಡ್ಡಿ ಜ್ಯೋತ್ಸ್ನಾ ತಿಳಿಸಿದರು.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿ, 17 ಖಾಸಗಿ ಆಸ್ಪತ್ರೆಗಳಿವೆ, ಇನ್ನೂ ಹೊಸದಾಗಿ ಮೂರು ಆಸ್ಪತ್ರೆಗಳಿಗೆ ಅನುಮತಿ ನೀಡಲಾಗುವುದು. ಈ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರುವ ಐಸಿಯು ಬೆಡ್‍ಗಳನ್ನು ಇಮ್ಮಡಿಗೊಳಿಸುವ ಮೂಲಕ ಸೋಂಕಿತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗ ನಗರದಲ್ಲಿ 131 ವೆಂಟಿಲೇಟರ್‍ಗಳು ಲಭ್ಯವಿದೆ, ಅದರಲ್ಲಿರುವವ ಕೋವಿಡ್ ಸೋಂಕಿತರ ಸಂಖ್ಯೆ ಅಷ್ಟೊಂದು ಹೆಚ್ಚಾಗಿಲ್ಲ. ಎಲ್ಲರು ಐಸಿಯು ವಾರ್ಡ್‍ಗೆ ಶಿಫ್ಟ್ ಆಗುತ್ತಿರುವುದರಿಂದ ಕೊರೆಯಾಗಿದೆ. ಆದರೆ, ವಾಸ್ತವದಲ್ಲಿ ಕೋವಿಡ್ ಕಾಣಿಸಿಕೊಂಡ ಎಲ್ಲರು ಆಸ್ಪತ್ರೆ ದಾಖಲಾಗಬೇಕಾಗಿಲ್ಲ. ರೋಗದ ಲಕ್ಷಣಗಳಿಲ್ಲದವರು, ಅಲ್ಲದೆ ಹೆಚ್ಚು ಗಂಭೀರವಾಗಿಲ್ಲದವರು ವೈದ್ಯರ ಸಲಹೆ ಪಡೆದುಕೊಂಡು ಹೋಮ್ ಐಸೋಲೇಷನ್ ಇದ್ದರೂ ನಡೆಯುತ್ತದೆ. ಅವರಿಗೆ ಪೆÇ್ರೀಟೋಕಾಲ್ ಚಿಕಿತ್ಸೆ ನೀಡಲಾಗುತ್ತದೆ. ಉಸಿರಾಟದ ಸಮಸ್ಯೆ ಆದವರು ಮಾತ್ರ ಆಸ್ಪತ್ರೆಗೆ ದಾಖಲಾಗಿ. ಸಮಸ್ಯೆಯಿಲ್ಲದಿದ್ದರೆ ಬೇಡ ಎಂದು ಡಿಸಿ ಜ್ಯೋತ್ಸ್ನಾ ಹೇಳಿದರು.
ಸೋಂಕಿತರ ಅಂಕಿ ಸಂಖ್ಯೆಯನ್ನು ಮರೆ ಮಾಚಲು ಬರಲ್ಲ. ಪ್ರಯೋಗಾಲಯದವರೆ ನೇರವಾಗಿ ಐಸಿಎಂ ಆರ್ ಪೆÇೀರ್ಟ್‍ಲ್‍ಗೆ ಅಪ್‍ಲೋಡ್ ಮಾಡುತ್ತಾರೆ. ಗಡಿಯಲ್ಲಿರುವ ಚೆಕ್‍ಪೆÇೀಸ್ಟ್‍ಗಳಲ್ಲಿ ಇನ್ನಷ್ಟು ಬಿಗುವಿನ ಕ್ರಮ ಕೈಗೊಳ್ಳಲಾಗುವುದು. ಮಹಾರಾಷ್ಟ್ರದಿಂದ ಬರುವ ಎಲ್ಲರ ವಿವರ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ರೆಮ್‍ಡಿಸಿವಿರ್ ತರಿಸಿಕೊಳ್ಳಲಾಗಿದೆ
ಜಿಮ್ಸ್ ಆಸ್ಪತ್ರೆಯಲ್ಲಿ ರೆಮ್‍ಡಿಸಿವಿರ್ ಇಂಜೆಕ್ಷನ್ ಕೊರತೆಯಿಲ್ಲ. ಅಲ್ಲದೆ ಸರ್ಕಾರಿ ಆಸ್ಪತ್ರೆಯಿಂದ ರೆಫರ್ ಆಗಿರುವ ರೋಗಿಗಳಿಗೂ ಅದರ ಸಮಸ್ಯೆಯಾಗಿಲ್ಲ. ಆದರೆ, ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳು ಅಷ್ಟೊಂದು ಸಿವಿಯಾರಿಟಿ ಇಲ್ಲದೆ ಹೋದರೂ ರೆಮ್‍ಡಿಸಿವಿರ್ ಬೇಡಿಕೆ ಇಡುತ್ತಿರುವುದರಿಂದ ಕೊರತೆ ಅನ್ನಿಸುತ್ತಿರಬಹುದು ಎಂದು ಜಿಲ್ಲಾಧಿಕಾರಿ ಜ್ಯೋತ್ಸ್ನಾ ತಿಳಿಸಿದರು.
ಜಿಮ್ಸ್‍ನಲ್ಲಿ 248 ರೆಮ್‍ಡಿಸಿವಿರ್ ಇಂಜೆಕ್ಷನ್ ಲಭ್ಯವಿವೆ. ಅಲ್ಲದೆ ಖಾಸಗಿ ಮೆಡಿಕಲ್‍ದಲ್ಲಿ 150 ಡೋಸ್ ತರಿಸಿದ್ದಾರೆ. ಹೀಗಾಗಿ ಈಗ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.

20 ಸಾವಿರ ಕರೊನಾ ಲಸಿಕೆ ಬಂದಿವೆ

ಕೋವಿಡ್ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಕರೊನಾ ಲಸಿಕೆ ಪಡೆದುಕೊಳ್ಳುವುದರ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಲಸಿಕೆ ಕೊರತೆಯಾಗಿತ್ತು. ಇಂದು ಮತ್ತೇ 20 ಸಾವಿರ ಲಸಿಕೆಗಳು ಜಿಲ್ಲೆಗೆ ಸರ್ಕಾರ ಕಳುಹಿಸಿಕೊಟ್ಟಿದೆ. ಅದರಲ್ಲಿ 17 ಸಾವಿರ ಕೋವಿಶೀಲ್ಡ್ ಮತ್ತು 3 ಸಾವಿರ ಕೋವ್ಯಾಕ್ಸಿನ್ ಇಂಜೆಕ್ಷನ್ ಲಭ್ಯವಿದೆ. ಹೀಗಾಗಿ ನಾಳೆಯಿಂದ ಮಾಮೂಲಿನಂತೆ ಎಲ್ಲಡೆ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದೆ ಎಂದು ಡಿಸಿ ವಿಜಯಾ ವಾಸಿರೆಡ್ಡಿ ಜ್ಯೋತ್ಸ್ನಾ ತಿಳಿಸಿದರು.

ಜಿಮ್ಸ್ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ (ಹಳೆಯ ಕಟ್ಟಡ)ಯನ್ನು ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯನ್ನಾಗಿಸಲಾಗುವುದು. ಈಗ ಅಲ್ಲಿರುವ ಪ್ರಸೂತಿ (ಗೈನಿಕ್)ಸೇವೆಗಳನ್ನು ಮುಂದುವರೆಸಲಾಗುವುದು. ಉಳಿದಂತೆ ಎಲ್ಲ ಬೆಡ್‍ಗಳನ್ನು ಕರೊನಾ ಸೋಂಕಿತರಿಗೆ ಬಳಸಿಕೊಳ್ಳಲು ಕ್ರಮ ಕೈಗೊಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಟ್ರಾಮಾಕೇರ್ ಸೆಂಟರ್‍ನಲ್ಲಿರುವ ಬೆಡ್‍ಗಳ ಜತೆಗೆ ಹೆಚ್ಚುವರಿಯಾಗಿ ಇನ್ನಷ್ಟು ಬೆಡ್ ಲಭ್ಯವಾಗುವುದರಿಂದ ಯಾರಿಗೂ ಬೆಡ್ ಕೊರತೆಯಾಗಲ್ಲ. ಅಗತ್ಯವಿರುವ ಎಲ್ಲ ಔಷಧಗಳು ಸಹ ದಾಸ್ತಾನು ಸಹ ಮಾಡಲಾಗಿದೆ. ಈಗಾಗಲೇ ಸೇಡಂ ಮತ್ತು ಅಫಜಲಪುರ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ಶುರು ಮಾಡಲಾಗಿದೆ. ಇನ್ನೇರಡು ತಾಲೂಕು ಆಸ್ಪತ್ರೆಗಳನ್ನು ಶೀಘ್ರದಲ್ಲಿಯೇ ಈ ವ್ಯವಸ್ಥೆ ಮಾಡಲಾಗುವುದು. ಮುಂಜಾಗ್ರತೆಯಾಗಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸೌಲಭ್ಯ ಹೊಂದಿರುವ 50 ಬೆಡ್‍ಗಳು ವ್ಯವಸ್ಥೆ ಮಾಡಲಾಗಿದೆ. ಕಲಬುರಗಿಯಲ್ಲಿ ಜಿಮ್ಸ್, ಟ್ರಾಮಾ ಕೇರ್ ಮತ್ತು ಇಎಸ್‍ಐ ಹೀಗೆ ಮೂರು ಕಡೆಗಳಲ್ಲಿ ಕರೊನಾ ಚಿಕಿತ್ಸೆ ಲಭ್ಯವಾಗಲಿದೆ ಎಂದು ವಿವರಿಸಿದರು.

ಕಲಬುರಗಿಯಲ್ಲಿ ನಿತ್ಯ 900 ಸಿಲಿಂಡರ್ ಆಕ್ಸಿಜನ್ ತಯಾರಿಸಲಾಗುತ್ತಿದ್ದು, ಅಷ್ಟು ಬಳಕೆಯಾಗುತ್ತಿದೆ. ಬೇಡಿಕೆಯಂತೆ ಉತ್ಪಾದನೆಯಿರುವುದರಿಂದ ಕೊರತೆಯಿಲ್ಲ. ಅಗತ್ಯವಾದಲ್ಲಿ ಬಳ್ಳಾರಿಯಿಂದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸರಬರಾಜು ಮಾಡಲಾಗುವುದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಯವರು ಆಕ್ಸಿಜನ್ ಕೊರತೆ ಬಗ್ಗೆ ಹೇಳಿಲ್ಲ. ತಾವು ಖುದ್ದಾಗಿ ಕೆಲವು ಕಡೆ ಭೇಟಿ ನೀಡಿ ಪರಿಶೀಲಿಸುವೆ.
ವಿ.ವಿ.ಜ್ಯೋತ್ಸ್ನಾ ಜಿಲ್ಲಾಧಿಕಾರಿ ಕಲಬುರಗಿ