ಕೋವಿಡ್ ಸೋಂಕಿತರಿಗೆ ರಾಷ್ಟ್ರೀಯ ಯೋಜನೆ ಸಿದ್ದಪಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ, ಏ 22- ಕೋವಿಡ್-19 ಸೋಂಕಿತರಿಗೆ ನೀಡಲಾಗುತ್ತಿರುವ ಅಗತ್ಯ ಔಷಧಿಗಳು, ಅವರಿಗೆ ನೀಡುವ ಚಿಕಿತ್ಸೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ವ್ಯವಸ್ಥೆ, ಲಸಿಕೆ ಬಗ್ಗೆ ರಾಷ್ಟ್ರೀಯ ಯೋಜನೆಯನ್ನು ತಯಾರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅಬ್ಬರಿಸುತ್ತಿದ್ದು, ಹಲವು ರಾಜ್ಯಗಳಲ್ಲಿ ರೋಗಿಗಳಿಗೆ ಹಾಸಿಗೆ ಆಕ್ಸಿಜನ್ ಜನ್ ಸಿಗದೆ ಪರದಾಡುತ್ತಿರುವ ಸಮಸ್ಯೆ ಮನಗಂಡು ಸ್ವಯಂ ಪ್ರೇರಿತರಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಸುಫ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಈ ಕುರಿತು ರಾಷ್ಟ್ರೀಯ ನೀತಿ ರೂಪಿಸಬೇಕೆಂದು ಹೇಳಿದೆ.
ದೇಶದಲ್ಲಿ ಕೋವಿಡ್-19 ಲಸಿಕೆಯ ವಿಧಾನ ಮತ್ತು ವಿಧಾನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಗಣಿಸು ವಂತೆಯೂ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ.
ಸಾಂಕ್ರಾಮಿಕದ ಮಧ್ಯೆ ಲಾಕ್ ಡೌನ್ ಘೋಷಿಸಲು ಹೈಕೋರ್ಟ್‌ಗಳ ಅಧಿಕಾರಕ್ಕೆ ಸಂಬಂಧಿಸಿದ ಅಂಶವನ್ನು ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳಾದ ಎಲ್ ಎನ್ ರಾವ್ ಮತ್ತು ಎಸ್ ಆರ್ ಭಟ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.