ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕರು

ಲಕ್ಷ್ಮೇಶ್ವರ, ಜೂ9: ಒಡೆಯರ್ ಮಲ್ಲಾಪುರ ಕೋವಿಡ ಕೇರ್ ಸೆಂಟರ್‍ದಲ್ಲಿ ಕುಂದ್ರಳ್ಳಿ ಗ್ರಾಮದ ಹಾಲಪ್ಪ ಮೇಟಿ ಇವರ 5 ವರ್ಷದ ಸುಪುತ್ರ ಶಿವಕುಮಾರ್ ಮೇಟಿಯ ಹುಟ್ಟುಹಬ್ಬವನ್ನು ಶಾಸಕರೇ ಸ್ವತಃ ಹೊಸ ಬಟ್ಟೆ ಹಾಗೂ ಕೇಕ್ ತಂದು ಕೋವಿಡ ಕೇರ್ ಸೆಂಟರ್‍ನಲ್ಲೇ ಆಚರಿಸಿ ಕೋವಿಡ ಸೋಂಕಿತರಿಗೆ ನಿಮ್ಮೊಂದಿಗೆ ನಾನೂ ಇದ್ದೇನೆ ಎಂದು ಆತ್ಮಸ್ಥೈರ್ಯವನ್ನು ತುಂಬಿ ಮಗುವಿನ ಉಜ್ವಲ ಭವಿಷ್ಯಕ್ಕೆ ಹಾರೈಸಿದರು.
ಜಾನಪದ ಕಲಾವಿದರನ್ನು ಆಹ್ವಾನಿಸಿ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಿ ಸ್ಮರಣೀಯವಾಗಿಸಿದರು. ಲಕ್ಷ್ಮೇಶ್ವರ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಶಿರಹಟ್ಟಿ ಸಿ ಪಿ ಐ ವಿಕಾಸ ಲಮಾಣಿ, ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಕ್ಷೇತ್ರದ ಶಿಕ್ಷಣಾಧಿಕಾರಿ ಬಿಇಒ ಬುರುಡಿ, ಆರೋಗ್ಯ ಇಲಾಖೆ ಅಧಿಕಾರಿ ಮಂಜುನಾಥ ಮರಿಗೌಡರ್, ಹಿರೇಮಠ ಮಂಜುನಾಥ್ ಮುದುಗಲ್, ಶಿರಹಟ್ಟಿ ಮಂಡಲ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ನವೀನ್ ಹಿರೇಮಠ, ಪ್ರಕಾಶ ಮಾದ್ನೂರ, ಪ್ರವೀಣ್ ಭೋಮಲೆ, ಸೋಮಣ್ಣ ಉಪನಾಳ, ಗಣೇಶ ಬೇವಿನಮರದ, ಸಿದ್ದಣ್ಣ ದುರ್ಗಣ್ಣವರ, ಅಭಯ್ ಜೈನ್, ಗಿರೀಶ್ ಬಾಳಿಹಳ್ಳಿಮಠ, ಮಂಜುನಾಥ ಮೇಟಿ, ಅಧ್ಯಕ್ಷ ಇಮಾಮ ಲಕ್ಷ್ಮೇಶ್ವರ, ರಾಮಣ್ಣ ಗೊಜಗೊಜಿ, ಹಿರಿಯರು, ಗಣ್ಯರು ಉಪಸ್ಥಿತರಿದ್ದರು.