ಕೋವಿಡ್ ಸೋಂಕಿಗೆ ತುತ್ತಾಗಿದ್ದ ಮಾಜಿ ಪ್ರಧಾನಿ ದೇವೇಗೌಡ ದಂಪತಿಗಳ ಚೇತರಿಕೆಗೆ ಹರಕೆ ತೀರಿಸಿದ ಮುಖಂಡರು

ಆಳಂದ:ಎ.5: ದೇಶ ಕಂಡ ಅಪರೂಪದ ಹಿರಿಯ ರಾಜಕಾರಣಿ ಮತ್ತು ಜೆಡಿಎಸ್ ಆಗ್ರ ನಾಯಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತವರ ಧರ್ಮಪತ್ನಿ ಚನ್ನಮ್ಮನವರು ಕೋವಿಡ್ ಸೂಂಕಿಗೆ ತುತ್ತಾಗಿ ಗುಣಮುಖರಾಗಿದ್ದಕ್ಕೆ ಜಿಲ್ಲಾ ಜೆಡಿ(ಎಸ್) ಕಾರ್ಯಾಧ್ಯಕ್ಷ ಜಫರ್ ಹುಸೇನ್ ಅವರು ತಮ್ಮ ಬೆಂಬಲಿತ ಮುಖಂಡರೊಂದಿಗೆ ಪಟ್ಟಣದ ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಿದರು.

ದೇವೇಗೌಡರು ಮತ್ತು ಚನ್ನಮ್ಮನವರಿಗೆ ಸೂಂಕು ತಗಲಿದ ಸುದ್ದಿ ಕೇಳಿ ಅಘಾತವಾಗಿ ಇರ್ವರು ಬೇಗ ಗುಣಮುಖರಾಗಲಿ ಎಂದು ಲಾಡ್ಲೆ ಮಶಾಸಕರಲ್ಲಿ ಪ್ರಾರ್ಥನೆ ಕೈಗೊಂಡು ಹರಕೆ ಹೊತ್ತಿದ ಮೂರೆ ದಿನದಲ್ಲಿ ಗುಣಮುಖರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ದರ್ಗಾಕ್ಕೆ ಹರಕೆ ಚಾದರ್, ಗುಲ್ಪ್ ತೊಡಸಿ ಹರಕೆ ತೀರಿಸಲಾಯಿರು ಎಂದು ಜಫರ್ ಹುಸೇನ್ ಅವರು ಹೇಳಿದರು.

ತಮ್ಮ 90ನೇ ಇಳಿ ವಯಸ್ಸಿನಲ್ಲೂ ದೇವೇಗೌಡರು ದೇಶದ ರೈತರ, ಕಾರ್ಮಿಕರ, ಬಡವರ, ದೀನ ದುರ್ಬಲರ ಬಗ್ಗೆ ಸದಾ ಕಾಳಜಿ ವಹಿಸಿ ಅವರ ಪರ ಧ್ವನಿ ಎತ್ತುವರು ಇಂಥ ನಾಯಕರು ಹೆಚ್ಚು ಕಾಲ ಬಾಳಿ ನಾಡಿನ ಉದ್ದಾರ ಮಾಡಲು ಅವಶಕತೆಯಾಗಿದೆ ಎಂದರು. ಗೌಡರು ಮತ್ತು ಚನ್ನಮ್ಮಾಜಿ ಅವರಿಗೆ ಸೂಂಕು ತಗಲಿ ಕೇವಲ ಐದೇ ದಿನದಲ್ಲಿ ನೆಗೆಟಿವ್ ವರದಿ ಬಂದಿದೆ. ಅಲ್ಲದೆ ಆರೋಗ್ಯ ಚೇತರಿಸಿಕೊಂಡಿದ್ದಾರೆ, ಇರ್ವರು ನೂರು ವರ್ಷ ಬಾಳಿ ಬೆಳಗಲಿ ಎಂದು ಪ್ರಾರ್ಥಿಸಿದರು.

ಜಿಲ್ಲಾ ಜೆಡಿಎಸ್ ಜಂಟಿ ಕಾರ್ಯದರ್ಶಿ ಅನ್ವರ್ ಪಟೇಲ್, ಲಾಡ್ಲೆಸಾಬ ಕುಲಸೆ, ಸೈಫಾನ್ ಖುರೇಷಿ, ಮಹಿಬೂಬ ಅನ್ಸಾರಿ, ಮೈನು ಅನ್ಸಾರಿ, ಲಾಡ್ಲೆ ಅನ್ಸಾರಿ, ಇಲಿಯಾಸ್ ಪಟೇಲ್ ಮತ್ತು ಅಯೂಬ್ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.