ಕೋವಿಡ್ ಸೆಂಟರ್‍ನಲ್ಲಿ ಸೋಂಕಿತರಿಗೆ ಯೋಗ ತರಬೇತಿ

ಕೆ.ಆರ್.ಪೇಟೆ:ಏ:29: ಪಟ್ಟಣದ ಕೋವಿಡ್ ಸೆಂಟರ್‍ನಲ್ಲಿ ವಿನೋದ್‍ರಾಜ್ ಮತ್ತು ಸೌಮ್ಯರಿಂದ ಉಚಿತ ಯೋಗ ತರಬೇತಿ.
ಕೋವಿಡ್ ಸೋಂಕಿತರು ಶೀಘ್ರವಾಗಿ ಗುಣ ಮುಖರಾಗಿ ತಮ್ಮ ಮನೆಗಳಿಗೆ ತೆರಳಿ ತಮ್ಮ ದೈನಂದಿನ ಜೀವನದಲ್ಲಿ ಯೋಗ, ಧ್ಯಾನ, ಹಾಗೂ ಪ್ರಾಣಾಯಾಮಗಳನ್ನು ಅಳವಡಿಸಿಕೊಂಡರೆ ಇಂದಿನ ಒತ್ತಡದ ಜೀವನದಲ್ಲಿ ಮನಸ್ಸಿನ ಏಕಾಗ್ರತೆ ಸಾಧಿಸಿ ರೋಗಗಳಿಂದ ದೂರ ಇರಬಹುದು ಎಂದು ಯೋಗ ಗುರುಗಳಾದ ವಿನೋದ್ ರಾಜ್ ಮತ್ತು ಸೌಮ್ಯ ತಿಳಿಸಿದರು.
ಅವರು ಪಟ್ಟಣದ ಹೊಸಹೊಳಲು ರಸ್ತೆಯ ಕೆರೆ ಕೋಡಿ ಬಳಿ ಇರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಂಕಿತರಿಗ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪ್ರತಿ ನಿತ್ಯ ಸಂಜೆ 1 ಗಂಟೆಗಳ ಕಾಲ ತಾಲ್ಲೂಕಿನ ಯೋಗ ತರಬೇತುದಾರರಾದ ವಿನೋದ್‍ರಾಜ್. ಮತ್ತು ಸೌಮ್ಯರವರು ಯೋಗ ಭ್ಯಾಸ ಮಾಡಿಸುತ್ತಿದ್ದಾರೆ. ಜೀವನದಲ್ಲಿ ಸದಾ ಆರೋಗ್ಯವನ್ನು ಕಾಪಾಡಿಕೊಂಡು ಪ್ರತಿ ನಿತ್ಯ ಕಾಫೀ, ಟೀ ಬದಲಿಗೆ, ಕμÁಯವನ್ನು ಸೇವಿಸಿ ಉಸಿರಾಟದ ಸಮಸ್ಯೆಗಳಿದ್ದರೆ ಕೆಲವು ಪ್ರಾಣಾ ಯಾಮಗಳನ್ನು ಮಾಡಿದರೆ ಪ್ರಾಥಮಿಕ ಹಂತದಲ್ಲಿಯೇ ಅವುಗಳನ್ನು ಪರಿಹರಿಸಿಕೊಳ್ಳಬಹುದು
ಇದರಿಂದ ಬೇಗ ಎಲ್ಲರೂ ಚೇತರಿಸಿಕೊಳ್ಳಬಹುದು. ಜೊತೆಗೆ ಪ್ರತಿ ನಿತ್ಯ ಯೋಗ ಮಾಡುವುದರಿಂದ ಜೀವನದಲ್ಲಿ ಒತ್ತಡ, ಸಮಸ್ಯೆ ಗಳನ್ನ ನಿವಾರಿ ಸಬಹುದು. ಏಕಾಗ್ರತೆ. ಬುಧ್ಧಿಶಕ್ತಿ, ನೆಮ್ಮದಿ ಕಾಣಬಹುದು. ಯೋಗ ಮಾಡಿ ರೋಗಗಳನ್ನುÀ ದೂರ ಮಾಡಬಹುದು.
ಶಿಬಿರದಲ್ಲಿ ತರಬೇತುದಾರಾದ ವಿನೋದ್‍ರಾಜ್. ಮತ್ತು ಸೌಮ್ಯ ಯೋಗಾಸನದ ಉಸಿರಾಟದ ಕ್ರಿಯೆಗಳು. ಧ್ಯಾನ. ಓಂಕಾರ. ವಜ್ರಾಸನ. ಪ್ರಾಣ ಯಾಮಗಳನ್ನು ಹೇಳಿಕೊಡಲಾಯಿತು. ಇಲ್ಲಿಂದ ಮನೆಗೆ ಹೋದ ನಂತರವೂ ತಪ್ಪದೇ ಅಭ್ಯಾಸ ಮಾಡಬೇಕು ಇದರಿಂದ ನಿಮ್ಮ ಆರೋಗ್ಯ ಸುಧಾರಣೆಯಾಗಲಿದೆ ಎಂದು ತಿಳಿಸಿದರು.