ಕೋವಿಡ್ ಸೆಂಟರ್‌ನಲ್ಲಿ ಮನರಂಜನಾ ಕಾರ್ಯಕ್ರಮ

ದಾವಣಗೆರೆ.ಜೂ.೪; ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಮನರಂಜನಾ ಕಾರ್ಯಕ್ರಮದ ಅಂಗವಾಗಿ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು.  ಕಾರ್ಯಕ್ರಮವು ಕೆ.ಎಸ್.ಬಸವಂತಪ್ಪ ಆನಗೋಡು ಇವರ ಪ್ರಾಯೋಜಕತ್ವದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಡಾ.ಮಂಜುನಾಥ ಇವರು ನೋಡಲ್ ಅಧಿಕಾರಿಗಳಾಗಿದ್ದು, ಕೊರೋನಾ ರೋಗಿಗಳಿಗೆ ಮನರಂಜನೆಗಾಗಿ ಆಯೋಜಿಸಿದೆ. ಇದರ ಜತತೆಗೆ ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಸಂಯಮದಿಂದ ಕೊರೋನಾ ಎದುರಿಸಬೇಕಾಗಿ ತಿಳಿಸಿದರು.