ಕೋವಿಡ್ ಸಾವು 2ನೇ ಸ್ಥಾನದಲ್ಲಿ ರಾಜ್ಯ

ಬೆಂಗಳೂರು, ಮೇ ೧೯-ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುತ್ತಿದ್ದು ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ.
ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಮರಣ ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದೆಹಲಿಯನ್ನು ಹಿಂದಿಕ್ಕಿ ೨ ನೇ ಸ್ಥಾನಕ್ಕೇರಿದೆ.
ಕರ್ನಾಟಕದಲ್ಲಿ ಮರಣ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮೇ ತಿಂಗಳಲ್ಲಿ ಕೇವಲ ೧೭ ದಿನಗಳಲ್ಲಿಯೇ ೬,೭೯೦ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ
ಈ ಮೂಲಕ ಮೊದಲ ಅಲೆಯಲ್ಲಿ ಭಾರಿ ಸಾವಿನ ಸಂಖ್ಯೆಯನ್ನು ಕಂಡಿದ್ದ ದೆಹಲಿಯನ್ನು ಹಿಂದಿಕ್ಕಿ ಕರ್ನಾಟಕ ಎರಡನೇ ಸ್ಥಾನಕ್ಕೇರಿದೆ.
ಮೇ. ೧೭ ರವರ ವೇಳೆಗೆ ಕರ್ನಾಟಕದಲ್ಲಿ ೨೨,೩೧೩ ಕೋವಿಡ್ ಸಾವುಗಳು ವರದಿಯಾಗಿದ್ದು, ದೆಹಲಿಯಲ್ಲಿ ೨೧,೮೪೬ ಮಂದಿ ಸೋಂಕಿನಿಂದ ಇದುವರೆಗೆ ಮೃತಪಟ್ಟಿದ್ದಾರೆ.
ಇನ್ನು ದೇಶದಲ್ಲಿ ಅತಿ ಹೆಚ್ಚು ಕೊವಿಡ್ ಮರಣ ಸಂಭವಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರದಲ್ಲಿ ಈವರೆಗೆ ೮೨,೪೮೬ ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.