ಕೋವಿಡ್ ಸಾವಿನ ಸಂಖ್ಯೆ ಇಳಿಸಲು ವೈದ್ಯರೊಂದಿಗೆ ಸಚಿವ ಸಿಂಗ್ ಸಭೆ

ಬಳ್ಳಾರಿ:ಮೇ.21- ಇಲ್ಲಿನ ಟ್ರಾಮಕೇರ್ ಕೋವಿಡ್ ಆಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಇಂದು ವೈದ್ಯರು, ಅಧಿಕಾರಿಗಳ ಸಭೆ‌ ನಡೆಸಿದರು.
ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ, ಟ್ರಾಮಾಕೇರ್ ನೋಡಲ್ ವೈದ್ಯಾಧಿಕಾರಿಗಳಾದ ಡಾ.ಶ್ರೀನಿವಾಸಲು, ಕಿರಣಕುಮಾರ್ ಮತ್ತಿತರರು ಇದ್ದರು.
ಜಿಲ್ಲೆಯಲ್ಲಿ ಈಗ ಒಂದಿಷ್ಟು ಸೋಂಕು ‌ಕಡಿಮೆ ಆಗುತ್ತಿದೆ, ಆದರೆ ಇನ್ನೂ ಸಾವು ನಿಲ್ಲುತ್ತಿಲ್ಲ. ಅದಕ್ಕಾಗಿ ಜನರು ಸಾಯದಂತೆ ಬಂದ ತಕ್ಷಣ ಚಿಕಿತ್ಸೆ ನೀಡಲು ಬೇಕಾದ ವ್ಯವಸ್ಥೆ ‌ಮಾಡುವ ಬಗ್ಗೆ ಚರ್ಚೆ ನಡೆಸಿದರು.