ಕೋವಿಡ್ ಸಾಮಾಗ್ರಿಗಳನ್ನು ನೀಡಿದ ಗಂಗಾವತಿ ವೆಂಕೋಬಣ್ಣ ಟ್ರಸ್ಟ್

ಹಗರಿಬೊಮ್ಮನಹಳ್ಳಿ :ಮೇ.29 ಗಂಗಾವತಿ ವೆಂಕೋಬಣ್ಣ ಟ್ರಸ್ಟ್ ವತಿಯಿಂದ 8 ಆಕ್ಸಿ ಮೀಟರ್ ಮತ್ತು 11 ಫ್ಲೋ ಮೀಟರ್‍ಗಳನ್ನು ಕೋವಿಡ್ ಸೋಂಕಿತರಿಗೆ ಅನುಕೂಲವಾಗಲೆಂದು ವಿತರಿಸಲಾಯಿತು.
ಪಟ್ಟಣದ ತಹಸೀಲ್ದಾರ್ ಕಛೇರಿ ಬಳಿ ಆಕ್ಸಿ ಮೀಟರ್ ಹಾಗೂ ಫ್ಲೋ ಮೀಟರ್ ಪರಿಕರಗಳನ್ನು ತಹಸೀಲ್ದಾರರಿಗೆ ನೀಡಿ ಗಂಗಾವತಿ ವಿಜಯಕುಮಾರ್ ಅವರು ಮಾತನಾಡಿ ಕೋವಿಡ್ 2ನೇ ಅಲೆಯ ಅಬ್ಬರಕ್ಕೆ ಇಡೀ ದೇಶವೇ ತತ್ತರಗೊಂಡಿದೆ. ಈ ಭಾರಿ ಗ್ರಾಮೀಣ ಭಾಗಕ್ಕೂ ಕೋವಿಡ್ ವ್ಯಾಪಿಸಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್‍ಗಳ ಕೊರತೆ ಉಂಟಾಗುತ್ತಿದೆ. ಸರ್ಕಾರ ಸರಬರಾಜು ಮಾಡುತ್ತಿರುವ ಕೋವಿಡ್ ಪರಿಕರಗಳು ಆಸ್ಪತ್ರೆಗಳಿಗೆ ಸಾಲುತ್ತಿಲ್ಲ. ಇದನ್ನು ಮನಗಂಡು ನಾವು ಈ ದಿನ 8 ಆಕ್ಸಿ ಮೀಟರ್ ಮತ್ತು 11 ಫ್ಲೋ ಮೀಟರ್‍ಗಳನ್ನು ನಮ್ಮ ಟ್ರಸ್ಟ್ ವತಿಯಿಂದ ನೀಡುತ್ತಿದ್ದೇವೆ. ಇದರಿಂದ ನಾಲ್ಕು ಜೀವಗಳು ಉಳಿಯುವುದಾದರೆ ಈ ನಮ್ಮ ಅಳಿಲುಸೇವೆ ಸಾರ್ಥಕ ಎಂದರು.
ತಹಸೀಲ್ದಾರ್ ಶರಣಮ್ಮ ಮಾತನಾಡಿ ರಾಜ್ಯಾಧ್ಯಂತ ಕೋವಡ್ 2ನೇ ಅಲೆಗೆ ಆಸ್ಪತ್ರೆಗಳು ತುಂಬಿ ಹೋಗಿವೆ. ಆದರೂ ಸರ್ಕಾರ ಯಾವುದಕ್ಕೂ ಕೊರತೆಯಾಗದಂತೆ ಎಲ್ಲವನ್ನು ನಿಬಾಯಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಕೆಲವು ಕೊರತೆಗಳು ಉಂಟಾಗಿದ್ದು ನಿಜ. ದಿಢೀರನೆ ಏರಿಕೆಯಾದ 2ನೇ ಅಲೆಯ ಸೋಂಕಿತರಿಂದಾಗಿ ಆರೋಗ್ಯ ವ್ಯವಸ್ಥೆ ಆರಂಭದ ಹಂತದಲ್ಲಿ ಸ್ವಲ್ಪ ಬುಡಮೇಲಾದಂತೆ ಕಂಡರೂ ಈಗ ಎಲ್ಲವೂ ತಹಬದಿಗೆ ಬಂದಿದೆ. ನಮ್ಮ ತಾಲೂಕು ಆಡಳಿತಕ್ಕೆ ಇಂತಹ ದಾನಿಗಳು ಕೈ ಜೋಡಿಸುವ ಮೂಲಕ ತಮ್ಮ ಕೈಲಾದಮಟ್ಟಿಗೆ ಕೋವಿಡ್ ಪರಿಕರಗಳನ್ನು ನಿತ್ಯವೂ ನೀಡುತ್ತಿರುವುದಕ್ಕೆ ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಗಂಗಾವತಿ ವಿಜೇತ, ವಸಂತ ಮಾಲವಿ, ಧರ್ಮಕರ್ತ ನಾಣ್ಯಾಪುರ ಕೃಷ್ಣಮೂರ್ತಿ, ಪತ್ರಕರ್ತ ಹುಳ್ಳಿ ಪ್ರಕಾಶ್, ಟಿ.ಎಂ.ಸದ್ಯೋಜಾತಯ್ಯ, ಬಾರಿಕರ ಗಂಗಾಧರ, ಡಿ.ಗೋಪಾಲ ¸ Éೀರಿದಂತೆ ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು..