ಕೋವಿಡ್ ಸಹಾಯವಾಣಿ ಆರಂಭ

ಬಸವಕಲ್ಯಾಣ,ಮೇ.26-ತಾಲ್ಲೂಕಿನ ಯರಭಾಗ ಗ್ರಾಮದಲ್ಲಿ ನಿಲಂಗಾ ಶಿಕ್ಷಣ ಸಂಸ್ಥೆ, ನಿಲಂಗಾ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶಾಂತಾ ಸೋಮಶೇಖರ ಮಹಾಜನ ಆವರಣದಲ್ಲಿ ಕೋವಿಡ್ ಸಹಾಯವಾಣಿ ಆರಂಭಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷರಾದ ಅನಿತಾ ಶಂಕರಗೌಡ ಅವರು ತಿಳಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜನರು ಭಯಪಡುವಂತಾಗಿದ್ದು, ಯಾವುದೇ ಕಾರಣಕ್ಕೂ ಜನರು ಭಯ ಪಡುವ ಅಗತ್ಯವಿಲ್ಲ. ಕೋವಿಡ್ ಸೋಂಕಿಗೆ ಒಳಗಾದ ಅನೇಕ ಜನರು ಗುಣಮುಖರಾಗುತ್ತಿದ್ದಾರೆ. ಅದನ್ನು ಧೈರ್ಯದಿಂದ ಎದುರಿಸಿ ನಾವೆಲ್ಲರೂ ಗೆಲ್ಲುವಂತ ಪಣ ತೊಡಬೇಕಾಗಿದೆ. ಅಲ್ಲದೆ ಕೋವಿಡ್ ಸೋಂಕಿತರ ಆಹಾರ ಪದ್ಧತಿ, ಔಷಧಿ ಸೇವನೆ, ಯೋಗ ಸೇರಿದಂತೆ ಇಮ್ಯುನಿಟಿ ಪವರ್ ಹೆಚ್ಚಿಸಿಕೊಂಡು ಶಾರೀರಿಕವಾಗಿ ಸದೃಢರಾಗಲು ಅನುಸರಿಸಬೇಕಾದ ಕ್ರಮಗಳ ಕುರಿತು ವೈದ್ಯರು ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರಿಗೆ ನಮ್ಮಿಂದ ಸಹಾಯವಾಗಲಿ ಎಂಬ ಉದ್ದೇಶದಿಂದ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಶೀಘ್ರವಾಗಿ ಸಂಸ್ಥೆ ವತಿಯಿಂದ ವೆಬಿನಾರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಈ ಕೆಳಕಂಡ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬಹುದಾಗಿದೆ. ಡಾ.ನಿವೇದಿತಾ 7892158242, ಪ್ರಿಯಾಂಕಾ 8151938888, ದರ್ಶನಾ 9980750668, ಸುಲ್ತಾನ 9341246489, ಮಂಜುಳಾ 9620362676, ವಿನಾಯಕ 8951150830, ಧನರಾಜ 990055520, ರಾಜಶೇಖರ 9019402211, ಜ್ಯೋತಿ 9513409861, ಮಾಹೆರೋಶ 8867781820, ಯಲ್ಲಾಲಿಂಗ 9705999764, ರವಿಕಿರಣ 8095347134, ಲೋಕೇಶ 8494875426 ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಈ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚನ್ನಗೌಡ 9964769107, ರಾಜು 99060002097, ರುದ್ರೇಶ 8073371267 ಇವರನ್ನು ಸಂಪರ್ಕಿಸಬಹುದು ಎಂದು ಅನಿತಾ ಶಂಕರಗೌಡ ತಿಳಿಸಿದ್ದಾರೆ.