ಕೋವಿಡ್-ಸರಳ ಜಯಂತಿ ಆಚರಣೆಗೆ ತೀರ್ಮಾನ

ಲಕ್ಷ್ಮೇಶ್ವರ, ಏ 4 ಃ ಇದೆ ತಿಂಗಳು 5 ರಂದು ಡಾ,ಬಾಬು ಜಗಜೀವನರಾಂರವರ 114 ನೇ ಹಾಗು ದಿ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 130 ನೇ ಜಯಂತಿ ಕಾರ್ಯಕ್ರಮ ಆಚರಿಸುವ ಕುರಿತು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಲಕ್ಷ್ಮೇಶ್ವರ ತಾಲೂಕ ಮಟ್ಟದ ಅಧಿಕಾರಿಗಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮುಖಂಡರ, ಚುನಾಯಿತ ಜನಪ್ರತಿನಿಧಿಗಳ, ಗಣ್ಯ ವ್ಯಕ್ತಿಗಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮತ್ತು ಸಾರ್ವಜನಿಕರ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ತಹಸೀಲ್ದಾರ ಬ್ರಮರಾಂಭಾ ಗುಬ್ಬಿಶೆಟ್ಟಿ ಅವರು ಕೋವಿಡ್-19 ಹಿನ್ನಲೆಯಲ್ಲಿ ಸರಕಾರ ಇದೇ ತಿಂಗಳು 20 ತಾರೀಖಿನವರೆಗೆ ಅನೇಕ ನಿಬಂಧನೆಗಳನ್ನು ಹೇರಿದ್ದು, ಡಾ,ಬಾಬು ಜಗಜೀವನರಾಂರವರ ಹಾಗೂ ದಿ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಕಚೇರಿಯಲ್ಲಿ ಸರಳವಾಗಿ ಆಚರಿಸುವಂತೆ ನಿರ್ದೇಶನವಿದೆ ಎಂದು ಹೇಳಿದರು. ಇದಕ್ಕೆ ಎಲ್ಲರ ಸಹಕಾರ ನೀಡುವಂತೆ ಮನವಿ ಮಾಡಿದರು.
ಆಗ ದಲಿತ ಸಂಘರ್ಷ ಸಮಿತಿ ತಾಲೂಕ ಮುಖಂಡರಾದ ಸುರೇಶ ನಂದೆಣ್ಣವರ, ಫಕ್ಕಿರೇಶ ಮ್ಯಾಟಣ್ಣವರ ಮತ್ತು ಕೊಟೇಪ್ಪ ವರ್ದಿ ಅವರು ಇದಕ್ಕೆ ಒಪ್ಪದೆ ಚುನಾವಣೆಗಳಿಗೆ, ಸಿನಿಮಾ ಮಂದಿರಗಳಿಗೆ, ಬಣ್ಣದಾಟಕ್ಕೆ ಇತರೆ ಕಾರ್ಯಕ್ರಮಗಳಿಗೆ ಇಲ್ಲದ ಕರೋನಾ ನಿರ್ಬಂದ ಮಹಾನುಭಾವರ ಜಯಂತಿ ಆಚರಣೆಗೆ ಅನುಮತಿ ಇಲ್ಲವೆ ಎಂದು ಪ್ರಶ್ನಿಸಿದರು. ಲಕ್ಷ್ಮೇಶ್ವರ ಹೊಸ ತಾಲೂಕ ಕೇಂದ್ರವಾಗಿದ್ದು, ಈ ಬಾರಿ ಅದ್ದೂರಿಯಾಗಿ ಬಾಬು ಜಗಜೀವನರಾಂ ಮತ್ತು ಡಾ.ಅಂಬೇಡ್ಕರ ಅವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ದರಿಸಿದ್ದೆವು ಅದಕ್ಕೆ ಅನುಮತಿ ನೀಡಬೇಕೆಂದರು. ಯಾವುದೇ ಕಾರಣ ನೀಡದೆ ಅದ್ದೂರಿ ಆಚರಣೆಗೆ ಅನುಮತಿ ನೀಡಿ ಎಂದು ಒತ್ತಾಯಿಸಿದರು.
ಇಂದು ನಡೆದ ಸಭೆಯ ನಡಾವಳಿಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವದು, ದಿ.20 ರವರೆಗೆ ಸರಕಾರದ ನಿರ್ಭಂದನೆಗಳಿದ್ದು, 20 ರ ನಂತರ ಸರಕಾರದ ಆದೇಶದ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಲ್ಲರೂ ಸೇರಿ ಶ್ರೇಷ್ಠರ ಸಂದೇಶಗಳನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯ ಮಾಡೋಣ, ಆಯಾ ದಿನಾಂಕಗಳಂದು ತಾಲೂಕ ಕಚೇರಿಯಲ್ಲಿ ಸಾಂಕೇತಿಕವಾಗಿ ಸರಳವಾಗಿ ಆಚರಿಸಲಾಗುವದು ಎಂದು ತಹಸೀಲ್ದಾರ ಹೇಳಿದರು.
ಸಭೆಯಲ್ಲಿ ಉಪತಹಸೀಲ್ದಾರ ಮಂಜುನಾಥ ದಾಸಪ್ಪನವರ, ತಾ.ಪಂ.ಇ.ಓ ಆರ್.ವೈ.ಗುರಿಕಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಬಿ.ಹರ್ತಿ, ಬಿಇಓ ಆರ್.ಎಸ್.ಬುರಡಿ, ಪುರಸಭೆಯ ಆರ್.ಎಂ.ಪಾಟೀಲ, ಪಿ.ಎಸ್‍ಐ ಶಿವಯೋಗಿ ಲೋಹಾರ, ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ, ಉಪಾಧ್ಯಕ್ಷ ರಾಮಪ್ಪ ಗಡದವರ, ತಾ,.ಪಂ.ಅಧ್ಯಕ್ಷ ಪರಶುರಾಮ ಇಮ್ಮಡಿ, ಚನ್ನಪ್ಪ ಜಗಲಿ, ಅನಿಲ ಮುಳಗುಂದ, ಮನೋಹರ ಕರ್ಜಗಿ, ನಂದಾ ನವಲೆ, ಅಶ್ವಿನಿ ಅಂಕಲಕೋಟಿ, ಹಾಗೂ ಪುರಸಭೆ ಸದಸ್ಯರು, ಸಂಘ ಸಂಸ್ಥೇಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.