ಕೋವಿಡ್ ಸಮಯದ ಆರ್ಥಿಕ ಪ್ಯಾಕೇಜ್ ನೀಡಲು ಒತ್ತಾಯ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.01: ಕೋವಿಡ್ ಸಮಯದ ಆರ್ಥಿಕ ಪ್ಯಾಕೇಜ್ ನೀಡಲು ಒತ್ತಾಯಿಸಿ ಇಂದು ಟೀಚರ್ಸ್ ಅಸೋಸಿಯೇಷನ್ ಆಫ್ ಸ್ಕೂಲ್ ಎಜುಕೇಶನ್ ಸಂಘಟನೆ ಹಾಗೂ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ  ಮನವಿ ಪತ್ರ ಸಲ್ಲಿಸಲಾಯಿತು.
ಖಾಸಗಿ ಶಿಕ್ಷಕರಿಗೆ ಕೋವಿಡ್ ಸಮಯದ ಆರ್ಥಿಕ ಪ್ಯಾಕೇಜ್ ಐದು ಸಾವಿರ ರೂಪಾಯಿ ನೀಡಲಾಗಿದೆ. ಆದರೆ ಕೆಲವು ಮಂದಿಗೆ ಮಾತ್ರ ಇದು ತಲುಪಿದೆ ಇನ್ನುಳಿದವರಿಗೆ ಈ ಹಣವು ಕೂಡಲೇ ತಲುಪಲು ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಅತಿಥಿ ಉಪನ್ಯಾಸಕರಿಗೆ ಶಿಕ್ಷಣ ಇಲಾಖೆ 10 ಪಿರಿಯಡ್ ಕಾರ್ಯಭಾರದ ಬದಲು 20 ಪಿರಿಯಡ್ ಮಾಡಲು ಹಲವಾರು ಕಾಲೇಜುಗಳ ಪ್ರಿನ್ಸಿಪಾಲರು ಗಳು ಒತ್ತಾಯಿಸುತ್ತಿದ್ದಾರೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಡೆಸಿಕೊಳ್ಳುತ್ತಿದ್ದಾರೆ, ಈ ವಿಚಾರವನ್ನೂ ಚಳಿಗಾಲದ ಅಧಿವೇಶನದಲ್ಲಿ  ಚರ್ಚಿಸಬೇಕೆಂದು ಹಾಗೂ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಚಿವ ಆನಂದ್ ಸಿಂಗ್ ಸ್ಪಂದಿಸಿ 2 ಬೇಡಿಕೆಗಳ ಬಗ್ಗೆ ಗಮನಹರಿಸುತ್ತೇನೆ ಎಂದು ತಿಳಿಸಿರುವುದಾಗಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಾಗರತ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.