ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ಸಿನಿಂದ ೧೫೦೦ಯುನಿಟ್ ರೆಡ್‌ಕ್ರಾಸ್ ಮೂಲಕ ರಕ್ತದಾನ

ಮಂಗಳೂರು, ಜೂ.೯-ದ.ಕ.ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ಇದರ ಆಶ್ರಯದಲ್ಲಿ, ರೆಡ್ ಡೋನೆಟ್(ರಿ) ಮತ್ತು ರೆಡ್‌ಕ್ರಾಸ್ ಸಂಸ್ಥೆ ಇದರ ಸಹಕಾರದೊಂದಿಗೆ, ಉರ್ವ ಚರ್ಚ್ ಹಾಲ್, ಲೇಡಿಹಿಲ್ ಇಲ್ಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತಾನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಇವರು ದ.ಕ.ಜಿಲ್ಲೆಯಲ್ಲಿ ೧೫೦೦ ಯುನಿಟ್ ರಕ್ತವನ್ನು ಸಂಗ್ರಹಿಸಿ, ಕೊರೊನಾ ಸಂದರ್ಭದಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ನಿವಾರಿಸಲು ಕಾರ್ಯಕ್ರಮ ಕೈಗೊಂಡಿದೆ ಎಂದು ನುಡಿದರು.
ಸಮಾರಂಭವನ್ನುದ್ದೇಶಿಸಿ ಮಾತಾನಾಡಿದ ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜ ಇವರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಲ್ಪ್‌ಲೈನ್ ವತಿಯಿಂದ ಎರಡು ಶಿಬಿರಗಳು ನಡೆದಿದ್ದು, ಎರಡೂ ಶಿಬಿರಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಭಾಗವಹಿಸಿರುವುದು ಶ್ಲಾಘನೀಯ. ದ.ಕ ಜಿಲ್ಲೆಯಲ್ಲಿ ಕೋವಿಡ್ ಹೆಲ್ಪ್‌ಲೈನ್ ವತಿಯಿಂದ ೩೦೦೦ ಕೋವಿಯಡ್ ೩ನೇ ಅಲೆಯನ್ನು ಎದುರಿಸಲು ‘ಕೋವಿಯಡ್ ಪ್ರಿವೆಂಟಿವ್ ಕಿಟ್ಟನ್ನು ತಯಾರಿಸಲಾಗಿದ್ದು, ರಿಕ್ಷಾ ಚಾಲಕರಿಗೆ, ಕಾರು ಚಾಲಕರಿಗೆ, ಕಾರ್ಮಿಕರಿಗೆ ಮತ್ತು ಪ್ರತಿಯೊಂದು ಕಡೆಗಳಲ್ಲಿ ಕೋವಿಡ್ ಹರಡದಂತೆ ತಡೆಗಟ್ಟಲು, ‘ಬ್ರೇಕ್ ದಿ ಚೈನ್’ ಕಾರ್ಯಕ್ರಮವನ್ನು ಜನಸಂದಣಿ ಇರುವ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಪ್ರವೀಣ್ ಕುಮಾರ್, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಚರ್ಚಿನ ಧರ್ಮಗುರುಗಳಾದ ರೆ.ಫಾ.ಸ್ಟ್ಯಾನಿ ಪಿರೇರಾ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಯುವನಾಯಕರಾದ ಮಿಥುನ್ ರೈ, ಪ್ರವೀಣ್‌ಚಂದ್ರ ಆಳ್ವ, ಎ.ಸಿ ವಿನಯರಾಜ್, ಶಶಿಧರ್ ಹೆಗ್ಡೆ, ಅನಿಲ್ ಕುಮಾರ್, ನವೀನ್ ಕುಮಾರ್, ಜೆಸಿಂತಾ ವಿಜಯ ಅಲ್ಫ್ರೆಡ್, ಮಾಜಿ ಕಾರ್ಪೋರೇಟರುಗಳಾದ ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಶ್ರೀಮತಿ ವಿದ್ಯಾ, ಶಕುಂತಾಳ ಗಟ್ಟಿ, ಯೂಸೂಫ್ ಉಚ್ಛಿಲ್, ಶ್ರೀಮತಿ ಶೋಭಾ ಕೇಶವ, ಶುಬೋದಯ ಆಳ್ವ, ಮಹೇಶ್ ಕುಮಾರ್, ಅಶಿತ್ ಪಿರೇರಾ, ಮಿಲಾಜ್ ಅತ್ತಾವರ, ವಿವೇಕ್‌ರಾಜ್ ಪೂಜಾರಿ, ಅನಿಲ್ ತೋರಾಸ್, ಆನಂದ್ ಸೋನ್ಸ್ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಆಲಿಸ್ಟನ್ ಡಿಕುನ್ಹಾ ಸ್ವಾಗತಿಸಿದರು ಮತ್ತು ಸತೀಶ್ ಪೆಂಗಲ್ ವಂದಿಸಿದರು.