ಕೋವಿಡ್ ಸಂತ್ರಸ್ಥರಿಗೆ ಸಚಿವ ಶ್ರೀರಾಮುಲು ಆಹಾರ ವಿತರಣೆ

ಬಳ್ಳಾರಿ ಜೂ 05 : ಕೋವಿಡ್ 19 ಎರಡನೇ ಅಲೆ ಅಂಗವಾಗಿ‌ ಲಾಕ್ ಡೌನ್ ಹಿನ್ನಲೆಯಲ್ಲಿ ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಬಳ್ಳಾರಿ ಗೆಳೆಯರ ಬಳಗದಿಂದ ಕಳೆದ 28 ದಿನಗಳಿಂದ ಸಂತ್ರಸ್ಥರಿಗೆ ನೀಡುವ ಆಹಾರ ವಿತರಣೆಯಲ್ಲಿ ಇಂದು‌ ಸಮಾಜ‌ಕಲ್ಯಾಣ ಸಚಿವ ಶ್ರೀರಾಮುಲು ಪಾಲ್ಗೊಂಡಿದ್ದರು.
ಆಸ್ಪತ್ರೆ ಆವರಣದಲ್ಲಿ ಹಸಿದ 500 ಕ್ಕೂ ಹೆಚ್ಚು ಜನರಿಗೆ ಊಟ,ಹಣ್ಣು, ಜ್ಯೂಸ್, ನೀರು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಮ್ಸ್ ಡೈರೆಕ್ಟರ್ ಡಾ. ಗಂಗಾಧರ ಗೌಡ, ಗೆಳೆಯರ ಬಳಗದ ಸದಸ್ಯರಾದ ಓಂಪ್ರಕಾಶ್ ಜಿ, ಅರುಣ್ ಬಾಲಚಂದ್ರ, ನಾಗರಾಜ್ ಬಿ.ಪಿ, ಅಜಯ್ ನಾಯ್ಡು, ತರುಣ್, ಅನಿಲ್, ಜೀವನ್, ರಾಮು, ಸಾಗರ್, ರಾಜು, ಧನಶೇಖರ್, ಸುರೇಶ್, ಕಾರ್ತಿಕ್, ಉಪಸ್ಥಿತರಿದ್ದರು.