ಕೋವಿಡ್ ಸಂತ್ರಸ್ತರಿಗೆ ಉಪಹಾರ

ದಾವಣಗೆರೆ. ಜೂ.೬; ಡಿಲಕ್ಸ್ ಸ್ಪೋರ್ಟ್ಸ್ ಕ್ಲಬ್, ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಹಾಗು ಗಜಾನನ ಯುವಕ ಸಂಘದ ವತಿಯಿಂದ ಕೋವಿಡ್ ಸಂತ್ರಸ್ತರಿಗೆ ಬೆಳಗ್ಗಿನ ಉಪಹಾರಕ್ಕೆ ಕೆ.ಟಿ.ಜೆ.ನಗರ 2ನೇ ಮುಖ್ಯ ರಸ್ತೆ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ  ಮೇಯರ್ ಎಸ್.ಟಿ ವೀರೇಶ್  ಹಾಗೂ ಪಾಲಿಕೆ ಸದಸ್ಯ ಲತೀಫ್  ಚಾಲನೆ ನೀಡಿದರು..ಡಿಲಕ್ಸ್ ಸ್ಪೋರ್ಟ್ಸ್ ಕ್ಲಬ್ ನ ಎಂ ಎನ್ ಚಂದ್ರಶೇಖರ್, ಲಿಂಗೇಶ,ಪಂಪಣ್ಣ, ಸಂಗಮೇಶ, ರಾಜು, ಚಂದ್ರು, ಹಾಗುಲೈಫ್ ಲೈನ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಬಾರಂಗಳ, ಉಪಾಧ್ಯಕ್ಷ ಪೃಥ್ವಿ ಬಾದಾಮಿ, ಇನಾಯತ್, ನಿರ್ದೇಶಕರಾದ ಗೋಪಾಲಕೃಷ್ಣ, ಮಾಧವ ಪದಕಿ, ಶ್ರೀಕಾಂತ ಎಂ.ಜಿ,  ರಜತ್ ವಿನಯ್ ಪದಕಿ, ಶಂಕರ್ ಮೂರ್ತಿ, ಶ್ರೀಕಾಂತ್ ಕೆ.ಎಂ, ಸುನಿಲ್, ವಿಜಯ್ ಕುಮಾರ್, ವಸಂತ್ ರಾಜು, ಮೋಹನ್ ಕುಮಾರ್, ಶ್ರೀಧರ್ ಕಲಾಲ್,  ಚನ್ನಬಸವ ಶೀಲವಂತ್, ಪುರ್ಷೋತಮ್, ಮಾಧವಿ ಗೋಪಿ ಇದ್ದರು.