ಕೋವಿಡ್ ಸಂಕಷ್ಟ: ಭಾರತಕ್ಕೆ ಪಿಚೈ ೧೨೫ ಕೋಟಿ ರೂ. ನೆರವು


ನವದೆಹಲಿ, ಏ ೨೬- ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕೋವಿಡ್ ನಿಂದಾಗಿ ಸಂಕಷ್ಟದಲ್ಲಿರುವ ಭಾರತಕ್ಕೆ ನೆರವು ನೀಡಿದ್ದಾರೆ.
ಭಾರತಕ್ಕೆ ೧೩೫ ಕೋಟಿ ರೂ. ನೀಡುವುದಾಗಿ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟನ್ನು ನೋಡಿ ತೀವ್ರಬೇಸರ ವ್ಯಕ್ತಪಡಿಸಿರುವ ಪಿಚ್ಚೈ ಇದರ ವಿರುದ್ಧ ಹೋರಾಡಲು ಕೈ ಜೋಡಿಸಿದ್ದಾರೆ.
ಇನ್ನು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ೩,೫೨,೯೯೧ ಹೊಸ ಕರೋನ ಪ್ರಕರಣಗಳು, ಧೃಡಪಟ್ಟಿದ್ದು, ೨,೮೧೨ ಮಂದಿ ಮೃತಪಟ್ಟಿದ್ದಾರೆ.