ಕೋವಿಡ್ ಸಂಕಷ್ಟ: ಭಾರತಕ್ಕೆ ನೆರವು ನೀಡಲು ಮುಂದಾದ ಇಯು,ಜರ್ಮನಿ

ನವದೆಹಲಿ, ಏ.25- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಅನೇಕ ದೇಶಗಳು ಭಾರತಕ್ಕೆ ನೆರವು ನೀಡಲು ಮುಂದಾಗಿದೆ.

ಯುರೋಪಿನ ಒಕ್ಕೂಟ ,ಜರ್ಮನಿ, ಪಾಕಿಸ್ತಾನ ,ಸೇರಿದಂತೆ ಜಗತ್ತಿನ ಅನೇಕ ದೇಶಗಳು ವಿವಿಧ ರೀತಿಯಲ್ಲಿ ಭಾರತಕ್ಕೆ ಸೋಂಕು ವಿರುದ್ದದ ಹೋರಾಟಕ್ಕೆ ನೆರವು ನೀಡಲು ಮುಂದಾಗಿದೆ.

ದೇಶದಲ್ಲಿ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ ತಕ್ಷಣ ಆಮ್ಲಜನಕ ಪೂರೈಕೆ ಮಾಡಲು ಅನೇಕ ದೇಶಗಳು ಮುಂದೆ ಬಂದಿದೆ. ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ನೆರವು ನೀಡುವುದಾಗಿ ಅನೇಕ ದೇಶಗಳು ತಿಳಿಸಿವೆ

ಭಾರತದಲ್ಲಿ ಕೋರೊನಾ ಸೋಂಕು ತಡೆಗೆ ಬೇಕಾಗುವ ಎಲ್ಲಾ ಸಹಕಾರ ಮತ್ತು ನೆರವು ನೀಡಲು ಸಿದ್ಧವಿರುವುದಾಗಿ ಜರ್ಮನಿ ಮತ್ತು ಯುರೋಪಿಯನ್ ಒಕ್ಕೂಟ ತಿಳಿಸಿದೆ

ಈ ಕುರಿತು ಪ್ರತಿಕ್ರಿಯಿಸಿರುವ ಯುರೋಪಿಯನ್ ಒಕ್ಕೂಟದ ಆಯುಕ್ತ ಜನೆಜ್ ಲೆನಾರ್ ಸಿಕ್ ಅವರು, ಭಾರತಕ್ಕೆ ಅಗತ್ಯವಿರು ಆಮ್ಲಜನಕ, ಔಷಧಿ ಪೂರೈಸಲು ಮುಂದಾಗಿರುವುದಾಗಿ ಅವರು ಹೇಳಿದ್ದಾರೆ

ತುರ್ತು ಪ್ರತಿಕ್ರಿಯೆ ಸಮಮ್ವನ ಕೇಂದ್ರ- ಇಆರ್‌ಸಿಸಿ ಭಾರತಕ್ಕೆ ಅಗತ್ಯವಾಗಿ ಬೇಕಾಗಿರುವ ನೆರವು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಪ್ರತಿಕ್ರಿಯಿಸಿ, ಭಾರತದೊಂದಿಗೆ ಜರ್ಮನಿ ಮೊದಲಿನಿಂದಲೂ ಉತ್ತಮ ಸ್ನೇಹ ಸಂಬಂಧ ಬಂದಿದೆ ಹೀಗಾಗಿ ಭಾರತಕ್ಕೆ ಅಗತ್ಯವಿರುವ ನೆರವು ನೀಡುವ ಮೂಲಕ ಕಷ್ಟಕಾಲದಲ್ಲಿ ಸ್ಪಂದಿಸುವುದಾಗಿ ಅವರು ತಿಳಿಸಿದ್ದಾರೆ.

ಮನುಕುಲವನ್ನು ಕಾಡುತ್ತಿರುವ ಸಾಮಾನ್ಯ ಶತ್ರುವಿನ ವಿರುದ್ದ ಹೊರಾಟ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಕೊರೋನಾ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಇದು ಸಹಜವಾಗಿ ಸೋಂಕು ಹೆಚ್ಚುತ್ತಿರುವ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವನ್ನು ಮತ್ತಷ್ಟು ಆತಂಕ ಸಿಲುಕುವಂತೆ ಮಾಡಿದೆ