ಕೋವಿಡ್ ಸಂಕಷ್ಟ ಪರಿಹರಿಸುವಂತೆ ನಾಡದೇವತೆಗೆ ಯದುವಂಶಸ್ಥರ ಪ್ರಾರ್ಥನೆ

ಮೈಸೂರು:ಏ:28:ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಮಹಾಮಾರಿ ಎರಡನೇ ಅಲೆ ಅಬ್ಬರ ಜೋರಾಗಿದ್ದು, ಈ ಹಿನ್ನೆಲೆ ಯಲ್ಲಿ ಸಂಕಷ್ಟಗಳನ್ನ ಪರಿಹರಿಸುವಂತೆ ತಾಯಿ ಚಾಮುಂಡೇಶ್ವರಿಗೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಜವಂಶಸ್ಥ ಯದುವೀರ್ ದೇಶದಲ್ಲಿ ಕಠಿಣ ಸಂದರ್ಭ ಎದುರಾಗಿದೆ.
ನಮ್ಮ ಪ್ರಾರ್ಥನೆ ಎಲ್ಲರೊಂದಿಗೂ ಇರುತ್ತದೆ ಸಂಕಷ್ಟಗಳನ್ನು ತಾಯಿ ಪರಿಹರಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಇದೇ ವೇಳೆ ವೈದ್ಯರು ಆರೋಗ್ಯ ಕಾರ್ಯಕರ್ತರಿಗೆ ಯದುವೀರ್ ಧನ್ಯವಾದ ಅರ್ಪಿಸಿದ್ದಾರೆ.