ಕೋವಿಡ್ ಸಂಕಷ್ಟ ಕಾಂಗ್ರೆಸ್ ಮುಖಂಡ ನಾಸೀರ್ ಹುಸೇನ್‍ರಿಂದ 45 ಸಾವಿರ ಕುಟುಂಬಕ್ಕೆ ತರಕಾರಿ, 35 ಸಾವಿರ ಜನರಿಗೆ ಊಟ

ಬಳ್ಳಾರಿ, ಜೂ.10: ನಗರದ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್ ಅವರು ಪಕ್ಷದ ಕಾರ್ಯಕರ್ತರು ಮತ್ತು ಇತರ ಮುಖಂಡರೊಂದಿಗೆ ಸೇರಿಂಕೊಂಡು. ಕೋವಿಡ್‍ನ ಲಾಕ್‍ಡೌನ್ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ನಗರದ ಜನತೆಗೆ ಒಂದಿಷ್ಟು ನೆರವಾಗಲೆಂದು ಪ್ರತಿ ಕುಟುಂಬಕ್ಕೆ ಆರು ಕಿಲೋ ತರಕಾರಿ ಮತ್ತು ಮಧ್ಯಾಹ್ನ ಊಟದ ಪಾಕೆಟ್‍ಗಳನ್ನು ಸಹ ವಿತರಿಸುವ ಕಾರ್ಯ ನಡೆಸಿದ್ದಾರೆ.
ಕಳೆದ 11 ದಿನಗಳಿಂದ ಈ ಕಾರ್ಯ ಆರಂಭಗೊಂಡಿದೆ. ನಗರದ ಶಾದಿ ಮಹಲ್‍ನಲ್ಲಿ ದಿನ ನಿತ್ಯ ಟಮೋಟೋ, ಹಸಿ ಮೆಣಸಿನಕಾಯಿ, ಕೋಸು, ಬದನೆಕಾಯಿ, ಆಲೂ, ಈರುಳ್ಳಿ ಮೊದಲಾದ ತರಕಾರಿ ತಂದು. ಒಂದೊಂದು ಪಾಕೆಟ್‍ಗೆ ಆರು ಕಿಲೋ ನಷ್ಟು ಎಲ್ಲಾ ಬಗೆಯ ತರಕಾರಿ ತುಂಬಲಾಗುತ್ತದೆ. ಈ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಕೊಂಡಿದ್ದಾರೆ.
ಮಧ್ಯಾಹ್ನ ಸ್ವತಃ ನಾಸೀರ ಹುಸೇನ್ ಅವರ ನೇತೃತ್ವದಲ್ಲಿ ವಿವಿಧ ವಾರ್ಡುಗಳಿಗೆ ತೆರಳಿ ಅಲ್ಲಿನ ಬಡಜನತೆಗೆ ತರಕಾರಿಯ ಕಿಟ್ ವಿತರಿಸಲಾಗುತ್ತದೆ. ಅಲ್ಲದೆ ಅದೇ ರೀತಿ ದಿನಾಲು 2 ವರೆ ಯಿಂದ ಮೂರು ಸಾವಿರ ಪುಡ್ ಪಾಕೆಟ್‍ಗಳನ್ನು ಸಿದ್ದಪಡಿಸಿ. ಅವುಗಳನ್ನು ಸಹ ವಿತರಿಸಲಾಗುತ್ತಿದೆ.
ದಿನಾಲು ನಗರದ ಒಂದೆರೆಡು ವಾರ್ಡುಗಳಿಗೆ ತೆರಳಿ ಈಕಾರ್ಯ ಮಾಡುತ್ತಿದ್ದು. ಪ್ರತಿ ವಾರ್ಡಿನಲ್ಲಿನಲ್ಲಿ ಕಿನಿಷ್ಟ ಎರೆಡು ಸಾವಿರ ಜನರಿಗೆ ಹಂಚಲಾಗುತ್ತದೆ.

ಪಕ್ಷದ ವರಿಷ್ಟರ ಮಾರ್ಗದರ್ಶನದಿಂದ. ಮತ್ತು ಜನತೆ ಸಂಕಷ್ಟ ಕಾಲದಲ್ಲಿದ್ದಾಗ ಅವರ ನೆರವಿಗೆ ನಮ್ಮ ಕೈಲಾದಷ್ಟು ನೆರವು ನೀಡಬೇಕೆಂಬ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಂಡೆ. ಈ ವರೆಗೆ ಒಂದು ಲಕ್ಷದ 30 ಸಾವಿರ ಕಿಲೋ ತರಕಾರಿ ಮತ್ತು 35 ಸಾವಿರ ಆಹಾರದ ಪಾಕೆಟ್‍ಗಳನ್ನು ವಿತರಿಸಲಾಗಿದೆ. ಲಾಕ್‍ಡೌನ್ ಮುಗಿಯುವ ವರೆಗೆ ಅಂದರೆ ಬಹುತೇಖ ಈ ತಿಂಗಳ 14 ವರೆಗೆ ಈ ಕಾರ್ಯ ಮಾಡಲಿದೆ.
ನಾಸೀರ್ ಹುಸೇನ್, ರಾಜ್ಯ ಸಭಾ ಸದಸ್ಯರು. ಬಳ್ಳಾರಿ