ಕೋವಿಡ್ ಸಂಕಷ್ಟದಲ್ಲೂ ರೈತರ ಕಲ್ಯಾಣಕ್ಕೆ ನೀಡಿದ ಕೊಡುಗೆ ಅಪಾರ : ಗುರುಲಿಂಗನಗೌಡ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಕೋವಿಡ್ ಸಂಕಷ್ಟದ ಕಾಲದಲ್ಲೂ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಅಡೆತಡೆ,  ಆರ್ಥಿಕ ಸಮಸ್ಯೆ ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಈಗ  ಅವರ ಸರಕಾರಕ್ಕೆ ವರುಷದ ಹರುಷ, ಈ  ಅವಧಿಯಲ್ಲಿ ರಾಜ್ಯದ ಜನತೆಗೆ, ರೈತರಿಗಾಗಿ ಅನೆರಕ ಕೊಡುಗೆ ನೀಡಿದ್ದಾರೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ
ಎಸ್.ಗುರುಲಿಂಗನಗೌಡ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ
ರಾಜ್ಯ ಸರ್ಕಾರ 2021-22ನೇ ಸಾಲಿನಲ್ಲಿ 50.35 ಲಕ್ಷ ರೈತರಿಗೆ 1007.13 ಕೋಟಿ ರೂ. ವಿತರಣೆ ಮತ್ತು 2022- 23ನೇ ಸಾಲಿನಲ್ಲಿ 47.83 ಲಕ್ಷ ರೈತರಿಗೆ 956.71 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.

 ರೈತ ಶಕ್ತಿ ಯೋಜನೆ ಅನುಷ್ಠಾನ:
ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಕೃಷಿ ಯಾಂತ್ರಿಕ ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರ ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಠ 5 ಎಕರೆಗೆ ಡೀಸೆಲ್ ಸಹಾಯಧನ ನೀಡುವ ರೈತ ಶಕ್ತಿ ಯೋಜನೆ ಅನುಷ್ಠಾನಕ್ಕೆ ಆದೇಶ ಹೊರಡಿಸಲಾಗಿದೆ.

 ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ದಿನವೇ ಘೋಷಿಸಿದ ಮಹತ್ವಾಕಾಂಕ್ಷೆಯ ಯೋಜನೆ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ, ಈ ಯೋಜನೆಯಡಿ ಪ್ರೌಢಶಾಲೆ ಯಲ್ಲಿ ಓದುತ್ತಿರುವ ರೈತರ ಹೆಣ್ಣು ಮಕ್ಕಳು ಹಾಗೂ ಹತ್ತನೇ ತರಗತಿಯ ನಂತರ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳಿಗೆ ಅವರು ಓದುತ್ತಿರುವ ಕೋರ್ಸಿಗೆ ಅನುಗುಣವಾಗಿ 2000/- ರೂ. ಗಳಿಂದ 11,000/- ರೂ. ವರೆಗೆ ವಿದ್ಯಾರ್ಥಿ ವೇತನ ಸೌಲಭ್ಯ. ಈವರೆಗೆ 9,48,292 ವಿದ್ಯಾರ್ಥಿಗಳಿಗೆ ರೂ. 397.213 ಕೋಟಿ ರೂ.ಗಳ ವಿದ್ಯಾರ್ಥಿವೇತನ DBT ಮುಖಾಂತರ ವರ್ಗಾವಣೆ ಮಾಡಲು ಮಂಜೂರಾತಿ ನೀಡಲಾಗಿದೆ.

 ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ:
ಯೋಜನೆಯು ಮಳೆಯಾಶ್ರಿತ ಪ್ರದೇಶಗಳಲ್ಲಿ ರೈತರು ವಿವಿಧ ಮಾದರಿಯ ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಈ ಅವಧಿಯಲ್ಲಿ ರೂ.19.02 ಕೋಟಿ ಬಿಡುಗಡೆಯಾಗಿದ್ದು, ರೂ.14.74 ಕೋಟಿ ವೆಚ್ಚ ಭರಿಸಲಾಗಿದೆ. ಈ ಯೋಜನೆಯಡಿ 6395 ಹೆಕ್ಟೇರ್ ಪ್ರದೇಶಗಳಲ್ಲಿ ತೋಟಗಾರಿಕೆ, ಪಶುಸಂಗೋಪನೆ, ಹುಲ್ಲುಗಾವಲು ಮತ್ತು ಮರ ಆಧಾರಿತ ಸಮಗ್ರ ಕೃಷಿ ಪದ್ಧತಿಗಳೊಂದಿಗೆ ಜೇನು ಸಾಕಾಣಿಕೆ, ಸೈಲೇಜ್ ಘಟಕ, ಎರೆಹುಳು ತೊಟ್ಟಿ ನಿರ್ಮಾಣ ಮಾಡಿದ್ದು, ರೈತರಿಗೆ ತರಬೇತಿಗಳನ್ನು ನೀಡಲಾಗಿದೆ. ಈ ಯೋಜನೆಯಡಿ ಸುಮಾರು 7805 ಫಲಾನುಭವಿಗಳು ಸವಲತ್ತುಗಳನ್ನು ಪಡೆದಿರುತ್ತಾರೆ.

 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ:
ಕೀಟ, ರೋಗ ಮತ್ತು ಕಳೆಗಳ ಬಾಧೆ, ಮಣ್ಣಿನ ಪೋಷಕಾಂಶ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯ ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಕೃಷಿ ಸಂಜೀವಿನಿ ಯೋಜನೆ ಜಾರಿ ಮಾಡಲಾಗಿದೆ. ಈವರೆಗೆ ಒಟ್ಟು 160 ವಾಹನಗಳ ಲೋಕಾರ್ಪಣೆ ಮಾಡಲಾಗಿದೆ.

 ಸಂಚಾರಿ ಪಶು ಶಸ್ತ್ರಚಿಕಿತಾ ವಾಹನ ಲೋಕಾರ್ಪಣೆ:
ಕೇಂದ್ರ ಸರ್ಕಾರವು ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 44 ಕೋಟಿ ರೂ. ಅನುದಾನ ಒದಗಿಸಿದೆ. ರೈತರ ಮನೆ ಬಾಗಿಲಿಗೆ ತುರ್ತು ಪಶು ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರತಿ 1 ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಪಶುಚಿಕಿತ್ಸಾ ವಾಹನದಂತೆ ರಾಜ್ಯಕ್ಕೆ 289.97 ಲಕ್ಷಜಾನುವಾರುಗಳಿಗೆ 275 ಸುಸಜ್ಜಿತ ಸಂಚಾರಿ ಪಶು ಚಿಕಿತ್ಸಾ ವಾಹನ ಒದಗಿಸಿದೆ. ಚಿಕಿತ್ಸೆ ಅಗತ್ಯವಿರುವ ಜಾನುವಾರು ಮಾಲೀಕರು ಹಾಗೂ ರೈತರು ಸಹಾಯವಾಣಿ 1962 ಸಂಖ್ಯೆಗೆ ಕರೆ ಮಾಡಿ ಅಗತ್ಯ ತುರ್ತು ಸೇವೆ ಪಡೆಯಬಹುದಾಗಿದೆ.

 ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ:
ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಿಸಿ ರೈತರ ಆದಾಯ ಹೆಚ್ಚಿಸಲು ಪ್ರಮುಖ ಹೂವು, ಹಣ್ಣು, ತರಕಾರಿ, ತೋಟದ ಬೆಳೆಗಳು, ಸುಗಂಧ ಹಾಗೂ ಔಷಧಿ ಬೆಳೆಗಳ ಪ್ರದೇಶ ವಿಸ್ತರಣೆಯನ್ನು ವಿವಿಧ ಯೋಜನೆಗಳ ಮುಖಾಂತರ ಕೈಗೊಳ್ಳುತ್ತಿದ್ದು, 38,652 ಹೆಕ್ಟೇರ್ ಪ್ರದೇಶ ವಿಸ್ತರಿಸಲಾಗಿದೆ.
 ಹನಿ ನೀರಾವರಿ ಘಟಕ ಅಳವಡಿಕೆ:
2021 -22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90ರಷ್ಟು ಹಾಗೂ ಇತರೆ ವರ್ಗದ ರೈತರಿಗೆ ಶೇ.45ರಷ್ಟು ಸಹಾಯ ಧನ ಒದಗಿಸಿದ್ದು 28,239.46 ಲಕ್ಷ ರೂ. ವಿತರಿಸಿ 36,490.89 ಹೆಕ್ಟೇರ್ ಪ್ರದೇಶದಲ್ಲಿ 38,676 ಫಲಾನುಭವಿಗಳ ತಾಕುಗಳಲ್ಲಿ ಹನಿ ನೀರಾವರಿ ಘಟಕ ಅಳವಡಿಸಲಾಗಿರುತ್ತದೆ.

 ಹಳೆಯ ತೋಟಗಳ ಪುನಃಶ್ವೇತನ:
ಮುಖ್ಯ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಕಿತ್ತಳೆ, ಗೇರಿನಲ್ಲಿ ಹಳೆಯ, ಅನುತ್ಪಾದಕ, ಕೀಟರೋಗ ಬಾಧಿತ, ತೇವಾಂಶ ಮತ್ತು ಪೋಷಕಾಂಶಗಳ ಕೊರತೆ, ಹವಾಮಾನ ಬದಲಾವಣೆ ಕಾರಣಗಳಿಂದಾಗಿ ಫಸಲು ಕುಂಠಿತವಾದ ಗಿಡಗಳಲ್ಲಿ ಇಳುವರಿ ವೃದ್ಧಿಸಲು JEKSCEÍ, ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಹಾಗೂ ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆಯಲ್ಲಿ ಒಟ್ಟು 7,907 ಹೆಕ್ಟೇರ್ ಪುನಃಶ್ವೇತನ ಕೈಗೊಳ್ಳಲಾಗಿದೆ.

 ತಾಳೆ ಬೆಳೆ ಯೋಜನೆ:
ದೇಶದ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ 25,000 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆ ಬೇಸಾಯ ಉತ್ತೇಜಿಸಲು ಯೋಜಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 2,522 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆ ವಿಸ್ತರಿಸಿದ್ದು 31,719,62 ಮೆ. ಟನ್ ಹಣ್ಣು ಉತ್ಪಾದಿಸಲಾಗಿದೆ. ಇವುಗಳ ಸಂಸ್ಕರಣೆಯಿಂದ ಒಟ್ಟು 5,461.89 ಮೆ. ಟನ್ ಕಚ್ಚಾತೈಲ ಎಣ್ಣೆ ಉತ್ಪಾದಿಸಲಾಗಿದೆ.

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ:
ರಾಜ್ಯದ 8.95 ಲಕ್ಷ ಹಾಲು ಉತ್ಪಾದಕರಿಗೆ 1,643.57 ಕೋಟಿ ರೂ. ಪ್ರೋತ್ಸಾಹಧನವನ್ನು ನೇರ ನಗದು ವರ್ಗಾವಣೆ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಧಾರವಾಡ, ಹಾವೇರಿ, ಗದಗ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟದ ವತಿಯಿಂದ ಹಾವೇರಿ ಜಿಲ್ಲೆಯ ಜಂಗಮಕೊಪ್ಪದ ಶೀತಲೀಕರಣ ಆವರಣದಲ್ಲಿ ನೂತನ ಹಾವೇರಿ ಡೇರಿ ಮತ್ತು ಯು.ಹೆಚ್.ಟಿ ಹಾಲು ಪ್ಯಾಕಿಂಗ್ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ.
ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪುಣ್ಯಕೋಟಿ ದತ್ತು ಯೋಜನೆ, ಗೋ ಶಾಲೆ ಸ್ಥಾಪನೆ ಮತ್ತು ನಿರ್ವಹಣೆ ಇನ್ನುಳಿದಂತೆ ಹಲವಾರು ರೈತಪರ ಯೋಜನೆಗಳನ್ನು  ರಾಜ್ಯಕ್ಕೆ ಬಿಜೆಪಿ ಸರ್ಕಾರ ನೀಡಿದೆ ಎಂದಿದ್ದಾರೆ.