ಕೋವಿಡ್ ಸಂಕಷ್ಟದಲ್ಲಿ ಮಾಧ್ಯಮ ಸೇವೆ ಅನನ್ಯ :ಚೆನ್ನುಕುಮಾರ

ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ
ಲಿಂಗಸುಗೂರು.ಜೂ.೭-ಕೋವಿಡ್ ಸಂಕಷ್ಟದ ಸಮಯದಲ್ಲಿ ಪತ್ರಕರ್ತರ ಸಲ್ಲಿಸುತ್ತಿರುವ ಸೇವೆ ಅನನ್ಯವಾಗಿದೆ ಎಂದು ನಿತಿನ್ ಡೆವಲ್ಪರ್‍ಸ್‌ನ ಮುಖ್ಯಸ್ಥ ಚೆನ್ನುಕುಮಾರ ಬಲಶೆಟ್ಟಿಹಾಳ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸಂಜೆ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಜೀವ ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಕೋವಿಡ್‌ಗೆ ಎಷ್ಟೋ ಪತ್ರಕರ್ತರು ಬಲಿಯಾಗಿದ್ದಾರೆ. ಪತ್ರಕರ್ತರು ಕೂಡಾ ತಮ್ಮ ಆರೋಗ್ಯದ ಕಾಳಜಿ ವಹಿಸಿಕೊಂಡು ಕೆಲಸ ಮಾಡಬೇಕು. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಆಹಾರ ಕಿಟ್ ನೀಡುವ ಮೂಲಕ ನನ್ನ ಅಳಿಲು ಸೇವೆ ಮಾಡಿದ್ದೇನೆ. ಲಾಕ್‌ಡೌನ್ ಸಂದರ್ಭದಲ್ಲಿ ಹೋಟೆಲ್, ಖಾನಾವಳಿ ಬಂದ್ ಆಗಿದ್ದರಿಂದ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ, ನಿರ್ಗತಿಕರಿಗೆ, ಊಟ ಸಮಸ್ಯೆಯಾಗುತ್ತಿರುವುದು ಮನಗಂಡು ಶಿವನಗೌಡ ನಾಯಕ ಅಭಿಮಾನಿ ಬಳಗದಿಂದ ಹಾಗೂ ನಿತಿನ್ ಡೆವಲ್ಪರ್‍ಸ್‌ವತಿಯಿಂದ ಕಳೆದ ೨೨ ದಿನಗಳಿಂದ ಪ್ರತಿನಿತ್ಯ ೮೦೦-೧೦೦೦ ಜನರಿಗೆ ಊಟ, ನೀರು, ಹಣ್ಣು ವಿತರಿಸುವ ನಿರಂತರವಾಗಿ ಮಾಡುತ್ತಿದ್ದೇನೆ. ಲಾಕ್‌ಡೌನ್ ಮುಗಿಯುವವರಿಗೆ ಊಟ, ನೀರು, ಹಣ್ಣು ವಿತರಿಸುವ ಕೆಲಸ ಮಾಡುತ್ತೇನೆ ಎಂದರು.
ವಿರೇಶ್ವರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಮಹಾಂತಗೌಡ ಪಾಟೀಲ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವರಾಜ ಕೆಂಭಾವಿ, ಆಜಪ್ಪ ಕರಡಕಲ್, ಮಹ್ಮದ್ ಪ್ರೋಟ್ಸ್, ನಿತಿನ್ ಬಲಶೆಟ್ಟಿಹಾಳ, ಮಂಜುನಾಥ ವಕೀಲ, ಹಾಗೂ ಇನ್ನಿತರಿದ್ದರು.