ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಸಕ್ಕರೆ ಕರಡೀಶ ಬ್ಯಾಂಕ್

ಬಳ್ಳಾರಿ, ಜೂ.01: ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಜೊತೆ ಉತ್ತಮ ವ್ಯವಹಾಋ ಮಾಡುತ್ತಾ ಬಂದಿರುವ ನಗರದ ಶರಣ ಸಕ್ಕರೆ ಕರಡೀಶ ಸೇವಾ ಪತ್ತಿನ ಸಹಕಾರಿ ಬ್ಯಾಂಕ್ ಪಾರಂಭವಾಗಿ ನಾಲ್ಕು ವರ್ಷ ಕಳೆದಿದೆ. ಈ ಬ್ಯಾಂಕ್ ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಧಾವಿಸುತ್ತದೆ.
ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಲಹೆಯಂತೆ ನಿನ್ನೆಯಿಂದ ಆರು ದಿನಗಳ ಕಾಲ ವಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ದಿನಂ ಪ್ರತಿ ಮಧ್ಯಾಹ್ನ ಕೋವಿಡ್ ನಿರಾಶ್ರಿತರಿಗೆ ಹಾಗೂ ಅವರ ಹಿಂದೆ ಬಂದವರಿಗೆ ಆಹಾರ ನೀರು ನೀಡಲು ಮುಂದಾಗಿದೆ.
ಅಲ್ಲದೆ, 2 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಯಂತ್ರಗಳನ್ನು ಸಹ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನಿಡಿದೆ.
ನಿನ್ನೆ ಆಹಾಋ ವಿತರಿಸುವ ಸಂದರ್ಬದಲ್ಲಿ ಬ್ಯಾಂಕಿನ ನಿರ್ದೇಶಕ ಆರ್. ಮಲ್ಲಿಕಾರ್ಜುನ ಗೌಡ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕೆ. ವಾಮಣ್ಣನವರು. ಸಿಈಓ ಪ್ರಭೂಲಿಂಗಪ್ಪ ಮತ್ತು ಸಿಬ್ಬಂದಿಗಳು ಹಾಜರಿದ್ದರು. ಈ ಕಾರ್ಯಕ್ಕೆ ಬ್ಯಾಂಕಿನ ಅಧ್ಯಕ್ಷ ಹಾವಿನಾಳ್ ಬಸವರಾಜ್, ಉಪಾಧ್ಯಕ್ಷ ಗುಡೆಕೋಟೆ ನಾಗರಾಜ್ ಮತ್ತು ನಿರ್ದೇಶಕ ಮಂಡಳಿಯ ಎಲ್ಲಾ ಸದಸ್ಯರ ಸಹಕಾರವೂ ಇದೆ. ಅಂದಾಜು 350 ಕ್ಕೂ ಅಧಿಕ ಜನರಿಗೆ ಊಟ ನೀಡಲಾಯಿತು.