ಕೋವಿಡ್ ಶತಮಾನದ ಬಿಕ್ಕಟ್ಟು ಎಲ್ಲರೂ ಕೈಜೋಡಿಸಲು‌ ಮೋದಿ ಮನವಿ

ನವದೆಹಲಿ, ಏ.30-ಮಾರಕ ಕೊರೊನಾ ಶತಮಾನದ ಬಿಕ್ಕಟ್ಟು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಈ ಸಾಂಕ್ರಾಮಿಕ ಪಿಡುಗಿನ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಸಚಿವ ಸಂಪುಟದ ಸಭೆ ನಡೆಸಿದ ವೇಳೆ, ಕೋವಿಡ್ ವಿರುದ್ಧ ಹೋರಾಟದಲ್ಲಿ ಜಯಗಳಿಸಿ ಮತ್ತೆ ಮೇಲೆದ್ದು ನಿಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಪ್ರತಿ ನಿಧಿಸುವ ಕ್ಷೇತ್ರಗಳ ಜನರ ಸಂಪರ್ಕದಲ್ಲಿ ಇರುವಂತೆ ಮಂತ್ರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳನ್ನು ಬೇಗನೆ‌ ಗುರುತಿಸಿ ಅವುಗಳನ್ನು ಪರಿಹರಿಸಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಜನರಿಗೆ ಸಹಾಯಮಾಡಿ ಅವರ ಅಭಿಪ್ರಾಯ ಸಂಗ್ರಹಿಸುವಂತೆಯೂ ಆದೇಶ ನೀಡಿದರು.
ಪರಿಸ್ಥಿತಿ ನಿಭಾಯಿಸಲು ಸರ್ಕಾರದ ಎಲ್ಲ ಸಂಸ್ಥೆಗಳು ಒಟ್ಟಗೂಡಿ ಕಾರ್ಯನಿರ್ವಹಿಸುತ್ತಿವೆ ಎಂದರು.