ಕೋವಿಡ್ ವ್ಯಾಕ್ಸಿನ್ ಪಡೆದ ಶಾಸಕ ದದ್ದಲ್

ರಾಯಚೂರು, ಏ.28-  ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಆಶಾಪೂರ ರಸ್ತೆಯಲ್ಲಿ ಇರುವ  ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದರು. ಕೋವಿಡ್ 2 ನೇಯ ಅಲೆ ತೀವ್ರವಾಗಿ ಇರುವುದರಿಂದ ರಾಯಚೂರು ಗ್ರಾಮೀಣ ಜನತೆ ಮುನ್ನೆಚ್ಚರಿಕೆಯಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಸಬೇಕು. ಈಗಾಗಲೇ 45 ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್ ನೀಡುತ್ತಿದ್ದಾರೆ. ಮೇ 1 ನಂತರ 18 ವಯಸ್ಸು  ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುತ್ತಾರೆ. ಆದ್ದರಿಂದ ಯಾರೂ ಕೂಡ  ಕೋವಿಡ್ ವಿಷಯದಲ್ಲಿ  ನಿರ್ಲಕ್ಷ ಮಾಡದೆ  ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುತ್ತಿದ್ದಾರೆ ಎಲ್ಲರೂ ಕೂಡ ತಪ್ಪದೇ ಪಡೆದುಕೊಳ್ಳಬೇಕು ಎಂದು  ತಿಳಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯ ಅಧಿಕಾರಿ ಶಾಕೀರ್, ತಾ.ಪಂ ಸದಸ್ಯ ಸೋಮಶೇಖರ್ ಪಾಟೀಲ್ , ಸ್ಟಾಪ್ ನರ್ಸಗಳು  ಉಪಸ್ಥಿತರಿದ್ದರು.