ಕೋವಿಡ್ ವೈದ್ಯಕೀಯ ಪರೀಕ್ಷೆ

ಬಾದಾಮಿ, ಏ 2: ತಾಲೂಕಿನ ಕಬ್ಬಲಗೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕೋವಿಡ್ ಲಸಿಕಾ ಚುಚ್ಚುಮದ್ದು ಹಾಕುವಿಕೆ, ಕೋವಿಡ್ ಪರಿಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಕೈಗೊಳ್ಳಲಾಯಿತು.
ಗ್ರಾಮದ 45 ವರ್ಷ ವಯೋಮಾನ ದಾಟಿದ ಎಲ್ಲ್ಲಾ ಪುರುಷ ಮತ್ತು ಮಹಿಳೆಯರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕೋವಿಡ್ ಲಸಿಕಾ ಚುಚ್ಚುಮದ್ದು ಹಾಕಲಾಯಿತು. ತದನಂತರ ಶಾಲಾ ಮಕ್ಕಳಿಗೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಲಾಯಿತು. ಈ ಸಂಧರ್ಭದಲ್ಲಿ ನಂದಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯವೈದ್ಯಾಧಿಕಾರಿ ಡಾ.ಆರ್.ಸಿ.ಭಂಡಾರಿ ಮಾತನಾಡಿ ಲಸಿಕಾ ನಂತರವೂ ಸಾಮಾಜಿಕ ಅಂತರ ಕಾಪಾಡಿ ಕೊರೊನ ರೋಗದಿಂದ ಮುಕ್ತವಾಗಿರಿ ಎಂದು ಹೇಳಿದರು.
ರಾಜ್ಯ ಪ್ರಶಸ್ತಿ ವಿಜೇತ ಮುಖ್ಯಶಿಕ್ಷಕ ವೈ.ಎಫ್.ಶರೀಫ್ ಮಾತನಾಡಿ ಕೊರೊನಾ ರೋಗದಿಂದ ಮುಕ್ತ ಭಾರತಕ್ಕಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಹಾಗೂ ಯುವ ಪೀಳಿಗೆ ಸಾಮಾಜಿಕ ಅಂತರ ಕಾಪಾಡಿ ಜೀವನ ಮತ್ತು ಜೀವ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯ ಭೀಮಪ್ಪ ಮುತ್ತಲಗೇರಿ, ಆಡಗಲ್ಲ ಗ್ರಾಮಪಂಚಾಯತಿ ಉಪಾಧ್ಯಕ್ಷ ಪಾಂಡುರಂಗ ಕಟ್ಟಿಮನಿ ಹಿರಿಯರಾದ ಮಾಡಗೆಪ್ಪ ಹುಲಿಕೇರಿ ಇತರ ಹಿರಿಯರು, ಶಾಲಾ ಸಿಬ್ಬಂದಿಗಳು ಹಾಜರಿದ್ದರು. ಇದೇ ಸಂಧರ್ಭದಲ್ಲಿ ಶಾಲಾ ಶಿಕ್ಷಕ ಸಿಬ್ಬಂದಿಗಳಿಗೂ ಲಸಿಕೆ ಹಾಕಲಾಯಿತು. ವೈದ್ಯ ಸಿಬ್ಬಂದಿಗಳಾದ ಲಿಂಗರಾಜ, ವಿದ್ಯಾ, ಜ್ಯೋತಿ, ರೇμÁ್ಮ, ಗಂಗಮ್ಮ, ರಮೇಶ, ಕೊರಳಹಳ್ಳಿ, ಚನ್ನಮ್ಮ, ತಮ್ಮಣ್ಣ, ಅಂಗನವಾಡಿ ಕಾರ್ಯಕರ್ತೆಯರಾದ ಕುಮಾರಿ ಗೀತ ಮುತ್ತಲಗೇರಿ, ರೇಣುಕಾ ತಳವಾರ ಹಾಗೂ ಆಶಾ ಕಾರ್ಯಕರ್ತೆಯರಾದ ಗಿರಿಯವ್ವ ಹಾಗೂ ಶಂಕ್ರಮ್ಮ ಹಾಜರಿದ್ದರು.