ಕೋವಿಡ್ ವಾರ್ ರೂಂ ಪರಿಶೀಲಿಸಿದ ಮುಖ್ಯ ಕಾರ್ಯದರ್ಶಿ

ಬೆಂಗಳೂರು, ಏ.24- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಏರಿಕೆ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ವಾರ್ ರೂಂಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಪರಿಶೀಲಿಸಿದರು.

ನಗರದಲ್ಲಿಂದು ಪಾಲಿಕೆ ವ್ಯಾಪ್ತಿಯ ಪೂರ್ವ ವಲಯದ ವಾರ್ ರೂಂಗೆ ಭೇಟಿ ನೀಡಿ ವಾರ್ ರೂಂ ಕಾರ್ಯ ಚಟುವಟಿಕೆಗಳ ಟೆಸ್ಟಿಂಗ್ , ಆಸ್ಪತ್ರೆಗಳ ಹಾಸಿಗೆ ಒದಗಿಸುವ ವ್ಯವಸ್ಥೆ , ಅಂಬ್ಯುಲೆನ್ಸ್ ಸೇವೆ, ಹೋಂ ಐಸೋಲೇಷನ್, ಕಾಂಟ್ಯಾಕ್ಟ್ ಟ್ರೇಸಿಂಗ್ ಗಳ ಬಗ್ಗೆ ಹಾಗೂ ಹೆಲ್ಪ್ ಲೈನ್ ಸೇವೆಯ ಪ್ರತಿ ದೂರವಾಣಿ ಕರೆ ಸ್ವೀಕರಿಸಿದ ತಕ್ಷಣ ಸಂಬಂಧ ಪರಿಶೀಲಿಸಿದರು.

ನಂತರ ಹೆಲ್ಪ್ ಲೈನ್ ಗಳ ಸಂಖ್ಯೆ ಹಾಗೂ ಅಗತ್ಯ ವಿದ್ದರೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಂತೆ ಸೂಚಿಸಿದರು. ಬಳಿಕ ಅಧಿಕಾರಿಗಳೂಂದಿಗೆ ಸಭೆ ನಡೆಸಿದ ಅವರು, ಈಗಿರುವ ಆಸ್ಪತ್ರೆಗಳಲ್ಲಿರುವ ಹಾಸಿಗೆ ಸೌಲಭ್ಯ ಹೆಚ್ಚಿಸಲು ಕೂಡಲೇ ಅಗತ್ಯ ಕ್ರಮ ವಹಿಸಲು ಹಾಗೂ ವೆಂಟಿಲೆಟರ್ ಸೌಲಭ್ಯ ವುಳ್ಳ ಹಾಸಿಗೆಗಳನ್ನು ಹೆಚ್ಚಿಸಲು ಕ್ರಮ ಹಾಗೂ ಅಗತ್ಯ ಸೌಲಭ್ಯ ವಿರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ಹಾಸಿಗೆ ವ್ಯವಸ್ಥೆಗೊಳಿಸಲು ಸೂಚಿಸಿದರು.

ಜೊತೆಗೆ ಸಿ.ಎಸ್.ಐ ಸಂಸ್ಥೆ ರವರು ಕಂಟೋನ್ಮೆಂಟ್ ಪ್ರದೇಶದಲ್ಲಿ ಸ್ಥಳ ಒದಗಿಸಲು ಮುಂದೆ ಬಂದಿದ್ದು, ಸದರಿ ಸ್ಥಳದಲ್ಲಿ ಕೊಡಲೆ ಹಾಸಿಗೆ ಇನ್ನಿತರೆ ವ್ಯವಸ್ಥೆ ಗೊಳಿಸಬೇಕು. ಅದೇ ರೀತಿ, ಎಲ್ಲಾ ಕೊವೀಡ್ ಆರೈಕೆ ಕೇಂದ್ರಗಳಲ್ಲಿ ಕನಿಷ್ಠ 10ರಷ್ಟು ಅಕ್ಸಿಜನ್ ವ್ಯವಸ್ಥೆಯುಳ್ಳ ಹಾಸಿಗೆ ವ್ಯವಸ್ಥೆಗೆ ಸೂಚನೆ ನೀಡಿದರು.

ಇದೇ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿರುವ 3 ವಲಯಗಳಲ್ಲಿ 23 ರಿಂದ 25 ಲಕ್ಷ ಜನಸಂಖ್ಯೆ ವಾಸಿಸುತ್ತಿದ್ದು, ಹೊರ ವಲಯಗಳಲ್ಲಿ 10 ಲಕ್ಷ ಜನಸಂಖ್ಯೆ ವಾಸಿಸುತ್ತಿದ್ದಾರೆ.

ಈ ಸಂಬಂಧ ಪಾಲಿಕೆಯ ಆಯಾ ವಲಯ ಮಟ್ಟದ ವಾರ್ ರೂಂನಲ್ಲಿ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್, ಯಾರಿಗೆ ಹಾಸಿಗೆ ಬೇಕು, ಯಾರಿಗೆ ಹಾಸಿಗೆ ಬೇಡ ಎಂಬ ವ್ಯವಸ್ಥೆ, ಹೋಮ್ ಐಸೋಲೇಟ್ ನಲ್ಲಿರುವವರ ಮೇಲೆ ನಿಗಾವಹಿಸುವ ವ್ಯವಸ್ಥೆ, ಐಸೋಲೇಟ್ ನಲ್ಲಿರುವವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುವುದು, ಆಂಬ್ಯುಲನ್ಸ್ ವ್ಯಸಸ್ಥೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ನುಡಿದರು.