ಕೋವಿಡ್ ವಾರಿಯರ್ ಕುಟುಂಬಕ್ಕೆ ಪರಿಹಾರ

ಬಳ್ಳಾರಿ, ಮೇ.27: ಕಳೆದ ವರ್ಷ ಕೊವಿಡ್ ಕರ್ತವ್ಯದ ವೇಳೆ ಮೃತಪಟ್ಟ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ 15ನೇ ವಾರ್ಡಿನ 2ನೇ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶಾರದಾ ಕುಟುಂಬಕ್ಕೆ ಸರ್ಕಾರದಿಂದ 30 ಲಕ್ಷ ರೂಪಾಯಿಗಳ ಮೊತ್ತದ ಪರಿಹಾರ ಚೆಕ್ ನ್ನು ವಿತರಿಸಲಾಗಿದೆ.
ಕೋವಿಡ್ ಸೋಂಕಿತರ ತಪಾಸಣೆ, ಚಿಕಿತ್ಸೆ ಮೊದಲಾದ ಕಾರ್ಯಗಳಲ್ಲಿ ಪಾಲ್ಗೊಂಡ ಅಂಗನವಾಡಿ, ಆಶಾಕಾರ್ಯಕರ್ತರು, ನರ್ಸಿಂಗ್ ಮತ್ತು ಡಿ.ಗ್ರೂಪ್ ನೌಕರರು ಕೋವಿಡ್ ಬಂದು ಸಾವನ್ನಪ್ಪಿದರೆ ಸರ್ಕಾರ 30 ಲಕ್ಷ ರೂ ಪರಿಹಾರ ನೀಡುತ್ತದೆ. ವೈದ್ಯರು ಸಾವನ್ನಪ್ಪಿದರೆ 50 ಲಕ್ಷ ರೂ ನೀಡುತ್ತದೆ.