ಕೋವಿಡ್ ವಾರಿಯರ್ಸ್ ಸಮಿತಿ ರಚನೆ

ಕಲಬುರಗಿ 27: ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಮಹಾನಗರ ಪಾಲಿಕೆ ಜೊತೆಗೂಡಿ ಇಂದು ಕೋವಿಡ್-19 ತಹಬಂದಿಗೆ ತರುವಲ್ಲಿ ಕೋವಿಡ್ ವಾರಿಯರ್ಸ್ ಸಮಿತಿ ರಚಿಸಲಾಯಿತು.
ಇದರಲ್ಲಿ ಸೂಕ್ಷ್ಮ ಜೀವಶಾಸ್ತ್ರ, ಜೀವರಸಾಯನಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳು ಕೋವಿಡ್ ಪಾಸಿಟಿವ್ ರೋಗಿಗಳ ಆನ್ ಲೈನ್ ನಲ್ಲಿ
ಅವರ ಆರೋಗ್ಯವನ್ನು ದಿನಾಲು ವಿಚಾರಿಸಿ ಅವರಿಗೆ ಬೇಕಾದ ಮನೋಸ್ಥೆರ್ಯ ತುಂಬುವರು. ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇವೆ ಎಂದು ರೋಗಿಗಳಿಗೆ ತಿಳಿಸಲು ಸಹಾಯ ಮಾಡುವರು. ಸಭೆಯ ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ದಯಾನಂದ ಅಗಸರ ವಹಿಸಿದ್ದರು ಈ ಸಭೆಯಲ್ಲಿಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ್, ಡಾವಿನೋದಕುಮಾರ ಹಾಗೂ ನಾಗರತ್ನ ದೇಶಮಾನ್ಯ ಹಾಜರಿದ್ದರು. ಡಾ. ಕೆ.ಎಸ್. ಮಾಲಿಪಾಟೀಲ, ಡಾ. ಆನಂದ ನಾಯ್ಕ ಹಾಗೂ ಡಾ. ಕೆ.ಲಿಂಗಪ್ಪ ಭಾಗವಹಿಸಿದ್ದರು.