ಕೋವಿಡ್ ವಾರಿಯರ್ಸ್‍ಗೆ ಸ್ಯಾನಿಟೈಸರ್, ಮಾಸ್ಕ್, ಫೇಸ್‍ಶೀಲ್ಡ್ ವಿತರಣೆ

ಚಿತ್ರದುರ್ಗ,ಮೇ.30; ಭಾರತೀಯ ಜೀವವಿಮಾ ನಿಗಮ ಚಿತ್ರದುರ್ಗ ಶಾಖೆ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಕೋವಿಡ್ ವಾರಿಯರ್ಸ್‍ಗಳಿಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಫೇಸ್‍ಶೀಲ್ಡ್‍ಗಳನ್ನು ವಿತರಿಸಲಾಯಿತು.
 ಭಾರತೀಯ ಜೀವವಿಮಾ ನಿಗಮ ಚಿತ್ರದುರ್ಗ ಶಾಖೆಯ ವ್ಯವಸ್ಥಾಪಕರಾದ ಶ್ರೀಧರ ಹೆಗಡೆ, ಕೃಷ್ಣಪ್ಪ ಹಾಗೂ ಎಲ್ಲಾ ಸಿಬ್ಬಂದಿಗಳು ವೈಯಕ್ತಿಕ ವೆಚ್ಚವನ್ನು ಭರಿಸಿ ಚಿತ್ರದುರ್ಗ ತಾಲ್ಲೂಕಿನ ಕೋವಿಡ್ ವಾರಿಯರ್ಸ್‍ಗಳಿಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಫೇಸ್‍ಶೀಲ್ಡ್‍ಗಳನ್ನು ಚಿತ್ರದುರ್ಗ ತಾಲ್ಲೂಕು ಆರ್ಯೋಗಾಧಿಕಾರಿ ಡಾ.ಬಿ.ವಿ.ಗಿರೀಶ್ ಅವರಿಗೆ ನೀಡಲಾಯಿತು.
 ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ತಮ್ಮ ಕಚೇರಿಯಲ್ಲಿ ಜನಸಂದಣಿ ನಿಯಂತ್ರಿಸಿ, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಕೈಗಳನ್ನು ಸ್ಯಾನಿಟೈಜರ್ ಉಪಯೋಗಿಸಿ ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
 ಭಾರತೀಯ ಜೀವವಿಮಾ ನಿಗಮದ ತಪ್ಪದೇ ಕೋವಿಡ್ ಲಸಿಕೆ ಪಡೆಯಬೇಕು. ಯಾವುದೇ ರೋಗ ಲಕ್ಷಣಗಳಿದ್ದರೂ ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
 ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ, ಭಾರತೀಯ ಜೀವವಿಮಾ ನಿಗಮ ಚಿತ್ರದುರ್ಗ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಫೋಟೋ ವಿವರ: ಚಿತ್ರದುರ್ಗದಲ್ಲಿ ಶನಿವಾರ ಭಾರತೀಯ ಜೀವವಿಮಾ ನಿಗಮ ಜಿಲ್ಲಾ ಶಾಖೆ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಕೋವಿಡ್ ವಾರಿಯರ್ಸ್‍ಗಳಿಗೆ ಶನಿವಾರ ಸ್ಯಾನಿಟೈಸರ್, ಮಾಸ್ಕ್ ಹಾಗೂ ಫೇಸ್‍ಶೀಲ್ಡ್‍ಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಅವರಿಗೆ ನೀಡಿದರು.