ಕೋವಿಡ್ ವಾಕ್ಸಿನ್ ಪಡೆದ ಪತ್ರಿಕಾ ಛಾಯಾಗ್ರಾಹಕರು

ಬೀದರ್:ಎ.22: ಇಂದು ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅವರಣದಲ್ಲಿ ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಮಾರೂತಿರಾವ ತಾಂದಳೆ ಹಾಗೂ ಅವರ ಪುತ್ರರಾದ ಗೋಪಿಚಂದ್ ತಾಂದಳೆ ಅವರು ಕೋರೊನಾ ಮಹಾಮಾರಿ ತಡೆಯಲು ಅನುಕುಲವಾಗುವಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೋವ್ಯಾಕ್ಸಿನ್ ಚುಚ್ಚುಮದ್ದು ಹಾಕಿಸಿಕೊಂಡರು. ಇದೇ ವೇಳೆ ನಮ್ಮ ಜಿಲ್ಲಾ ಪ್ರತಿನಿಧಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸಹ ಕೋವ್ಯಾಕ್ಸಿನೇಶನ್ ಪಡೆದಿರುವುದಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.